ಹುಬ್ಬಳ್ಳಿ: ವ್ಯಕ್ತಿಯೋರ್ವ ಕಡಿದ ಹಾವಿನ ತಲೆ ಜಜ್ಜಿ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಘಟನೆ ಜರುಗಿದೆ. ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಈ ಘಟನೆ ಜರುಗಿದೆ. ಫಕ್ಕೀರಪ್ಪ ಅಣ್ಣಿಗೇರಿ ಎಂಬ ಯುವಕ ತನ್ನ ತಂದೆ ಜೊತೆ ಶೇಂಗಾ ಕೀಳಲು ಹೋಗಿದ್ದ. ಈ ವೇಳೆ ಫಕ್ಕೀರಪ್ಪ ಅಣ್ಣಿಗೇರಿ ಅವರಿಗೆ ಹಾವು ಕಚ್ಚಿದೆ
ಫಕ್ಕೀರಪ್ಪ ಹಾವು ಕಚ್ಚಿದ ಕೂಡಲೇ ಹಾವಿನ ತಲೆ ಜಜ್ಜಿ ಕೊಂದಿದ್ದಾನೆ. ನಂತರ ತಂದೆ ಈರಪ್ಪನ ಜೊತೆ ಆಸ್ಪತ್ರೆಗೆ ಬಂದು ಅಡ್ಮಿಟ್ ಆಗಿದ್ದಾನೆ. ವೈದ್ಯರಿಗೆ ಹಾವನ್ನ ತೋರಿಸಿ, ಇದೆ ಹಾವು ಕಚ್ಚಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಸದ್ಯ ಯುವಕನನ್ನು ವೈದ್ಯರು ದಾಖಲಿಸಿಕೊಂಡು ಚಿಕಿತ್ಸೆ ಕೊಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.