ಟೆಂಪಲ್ ರನ್ ಮಾಡಿದ ಮಾಜಿ ಶಾಸಕ ಅಮೃತ ದೇಸಾಯಿ –ಯುವಮಿತ್ರರು ಮುಖಂಡರೊಂದಿಗೆ ವಿವಿಧ ದೇವಸ್ಥಾನಗಳಿಗೆ ತೆರಳಿ ದೇವಾನುದೇವತೆಗಳ ಆಶೀರ್ವಾದ ಪಡೆದುಕೊಂಡ ಧಣಿ
ಧಾರವಾಡ –
ಹೌದು ಆಯುಧ ಪೂಜೆ ಮತ್ತು ಮಹಾನವಮಿ ಹಿನ್ನಲೆಯಲ್ಲಿ ಮಾಜಿ ಶಾಸಕ ಅಮೃತ ದೇಸಾಯಿ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದರು.ಧಾರವಾಡದ ವಿವಿಧ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆಯನ್ನು ಸಲ್ಲಿಸಿ ದೇವಾನು ದೇವತೆಗಳ ದರ್ಶನವನ್ನು ಪಡೆದುಕೊಂಡರು.ಆಯುಧ ಪೂಜೆ ಮತ್ತು ಮಹಾನವಮಿ ಹಿನ್ನಲೆಯಲ್ಲಿ ಈ ಒಂದು ಟೆಂಪಲ್ ರನ್ ನ್ನು ಮಾಜಿ ಶಾಸಕ ಅಮೃತ ದೇಸಾಯಿ ಮಾಡಿದರು.ಆಯುಧಪೂಜಾ ಹಾಗೂ ಮಹಾನವಮಿಯ ಅಂಗವಾಗಿ ಧಾರವಾಡ ಶಹರದ ಕಿಲ್ಲಾ ದುರ್ಗಾದೇವಿ ದೇವಸ್ಥಾನ, ಹೊಸಯಲ್ಲಾಪುರದ ಬನಶಂಕರಿ ದೇವಸ್ಥಾನ ಹಾಗೂ ನಗರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿಯ ಆಶೀರ್ವಾದ ಪಡೆದುಕೊಂಡರು. ಈ ಒಂದು ಸಂಧರ್ಭದಲ್ಲಿ ಅನೇಕ ಪ್ರಮುಖರು ಹಾಗೂ ಯುವಮಿತ್ರರು ಉಪಸ್ಥಿತರಿದ್ದರು.ಇದರೊಂದಿಗೆ ಮಾಜಿ ಶಾಸಕ ಅಮೃತ ದೇಸಾಯಿ ಟೆಂಪಲ್ ರನ್ ಮಾಡುತ್ತಾ ಮತ್ತೆ ಆಕ್ಟೀವ್ ಆಗಿದ್ದಾರೆ.
ಉದಯ ವಾರ್ತೆ ಧಾರವಾಡ