ರೈತನ ಸಾವು ಪ್ರಕರಣ.ಸಾವಿನ ಹಿಂದೆ ಅನುಮಾನದ ಹುತ್ತ.ರೈತ ಆತ್ಮಹತ್ಯೆನಾ..ಮತ್ತೆ ಬೇರೇನಾ..ಚಿಕ್ಕನೆರ್ತಿ ಗ್ರಾಮದಲ್ಲೆಲ್ಲಾ ಬೇರೇ ವಾಸನಿ ಹರಿದಾಡುತ್ತಿದೆ..
ಕುಂದಗೋಳ:- ಕುಂದಗೋಳ ತಾಲೂಕಿನ ಚಿಕ್ಕನೆರ್ತಿ ಗ್ರಾಮದ ಕಲ್ಲಪ್ಪ ಶ್ಯಾನವಾಡ ವಯಸ್ಸು 70 ರ ಆಸುಪಾಸು ಇರಬಹುದು.ಕಲ್ಲಪ್ಪ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಮನೆಯಲ್ಲಿ ವಿಷ ಸೇವಿಸಿ ಹುಬ್ಬಳ್ಳಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಆದರೆ ಕಲ್ಲಪ್ಪನ ಸಾವನ್ನ ಕುಂದಗೋಳ ಪೋಲೀಸರು ರೈತ ಆತ್ಮಹತ್ಯೆ ಅಂತಾ ಎಪ್ಆಯ್ ಆರ್ ದಾಖಲಿಸಿದ್ದಾರೆ.ಆದರೆ ಪೋಲೀಸರ ಈ ನಡೆ ಸಂಶಯಾಸ್ಪದವಾಗಿದೆ ಅಂತಾ ಗ್ರಾಮದ ಜನರೇ ಮಾತಾಡಿಕೊಳ್ಳುತ್ತಿದ್ದಾರೆ.
ಕಲ್ಲಪ್ಪ ಸಾವಿನ ಹಿಂದಿನ ರಹಸ್ಯ ಬೇರೇನೇ ಇದೆ ಎನ್ನಲಾಗಿದೆ. ಅವನ ಸಾವಿಗೆ ಅವನ ಬ್ಯಾಂಕ್ ಅಕೌಂಟನಲ್ಲಿರುವ ಹಣ ಕಾರಣವಾಯಿತು ಅಂತಾ ಹೇಳಲಾಗಿದೆ.
ಅಷ್ಟಕ್ಕೂ ಆ ಕಲ್ಲಪ್ಪ ಎಣ್ಣಿ ತೊಗೊಂಡು ಸಾಯು ಮನುಷ್ಯ ಅಲ್ಲಾ ಬಿಡ್ರಿ.ಅದು ಬೇರೇನೆ ಇದೆ.ಅವನ ಅಕೌಂಟ್ ನಲ್ಲಿ ಒಂದು ಒಂದು ಲಕ್ಷದ ಆಸುಪಾಸಿನಲ್ಲಿ ದುಡ್ಡಿತ್ತು ಅದಕ್ಕೆ ಅವರ ಮನೆಯಲ್ಲಿ ………ನಡೀತು ಅಂತ ಅಲ್ಲಿಯ ಜನಾನೇ ಮಾತಾಡಿಕೊಳ್ಳುತ್ತಿದ್ದಾರೆ.ಆದರೆ ನಮ್ಮ ಪೋಲೀಸರ ಹೆಂಗ್ರೀಪಾ ಇದನ್ನೇನು ನೋಡದೇ,..ಕೇಳದೇ..ವಿಚಾರಣೆನೂ ಮಾಡದೇ ರೈತ ಆತ್ಮಹತ್ಯೆ ಅಂತಾ ಹೆಂಗ ಮಾಡಿದರೀಪಾ ಅಂತಾ ಮಾತಾಡಿಕೊಳ್ಳುತ್ತಿದ್ದಾರೆ…