ರಾಯಚೂರು:- ರಾಜ್ಯದ ಮತ್ತೋರ್ವ ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ಪ್ರಣವ ಪಂಚಾಕ್ಷರಿ ಗುರುಪೀಠದದ ಶಂಭು ಸೋಮನಾಥ ಶಿವಾಚಾರ್ಯ ಶ್ರೀ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ. ಪ್ರಣವ ಪಂಚಾಕ್ಷರಿ ಗುರುಪೀಠದ ಶಂಭು ಸೋಮನಾಥ ಶಿವಾಚಾರ್ಯಶ್ರೀ ತಮ್ಮ ಮಠದ ಸೇವೆಗೆ ಬಂದಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮೂಲತಃ ಆಂಧ್ರಪ್ರದೇಶ ಮೂಲದವರಾದ ಸಂತ್ರಸ್ತ ಮಹಿಳೆ ಕಳೆದ 6 ತಿಂಗಳಿಂದ ಅಪ್ರಾಪ್ತ ಪುತ್ರಿ ಜೊತೆ ಮಠದಲ್ಲೇ ವಾಸ್ತವ್ಯ ಹೂಡಿದ್ದರು ಅನ್ನೋ ಮಾಹಿತಿ ಸಿಕ್ಕಿದೆ.
ದೌಜನ್ಯದ ಬಳಿಕ ಸ್ವಾಮೀಜಿ ವಿರುದ್ಧ ದೂರು ನೀಡಲು ಸಂತ್ರಸ್ತೆ ಠಾಣೆಗಳಿಗೆ ಅಲೆದಾಡಿದ್ದಾರೆ. ಠಾಣೆಯ ವಿಜಿಟರ್ ರಿಜಿಸ್ಟರ್ ಬುಕ್ನಲ್ಲಿ ಸಂತ್ರಸ್ತ ಮಹಿಳೆಯ ಹೆಸರು, ವಿಳಾಸ ದಾಖಲಾಗಿದೆ. ಆದರೆ ಈಗ ಎಲ್ಲೂ ಕಾಣಿಸಿಕೊಳ್ಳದೆ ಮಗಳ ಜೊತೆ ಮಹಿಳೆ ತೆರಳಿದ್ದಾರೆ. ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ
ಇನ್ನು ಈ ಘಟನೆ ಸಂಬಂಧ ಶ್ರೀ ಶಂಭುಸೋಮನಾಥ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ವಿರುದ್ಧದ ಆರೋಪಗಳೆಲ್ಲಾ ನಿರಾಧಾರ. ಆ ಮಹಿಳೆ ಅನುಷ್ಠಾನದಲ್ಲಿರೋವಾಗ ಮಠದಲ್ಲಿ ಸೇವೆ ಮಾಡಲು ಬರ್ತಿನಿ ಅಂದ್ರು. ಆ ಮಹಿಳೆ ಮಠದ ಗೋಶಾಲೆಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಮಠದಲ್ಲಿ ನಮ್ಮ ಭಕ್ತರಿಗೂ ಮತ್ತೆ ಅವರಿಗೂ ಸ್ವಲ್ಪ ಜಗಳ ಆಗಿತ್ತು. ನೀವು ಇಲ್ಲಿರೋದು ಬೇಡವೆಂದು ನಾವೇ ಹೇಳಿ ಕಳುಹಿಸಿ ಕೊಟ್ಟಿದ್ದೀವಿ. ಈ ಬಗ್ಗೆ ಸಿಟ್ಟಾಗಿ ಪೊಲೀಸ್ ಠಾಣೆ ಹೋಗಿರುವ ವಿಚಾರ ಕೂಡ ಗೊತ್ತಾಯಿತು. ಕರೆದು ಬುದ್ದಿಮಾತು ಹೇಳಿ ಸಹ ಕಳುಹಿಸಿ ಕೊಟ್ಟಿದ್ದೀವಿ. ಅದನ್ನ ತಪ್ಪು ಕಲ್ಪನೆ ಮಾಡಿಕೊಂಡು ಅಪಪ್ರಚಾರ ಮಾಡುವುದು ಲಕ್ಷಣವಲ್ಲ ಎಎಂದರು.