ಚಿಕ್ಕ ಮಂಗಳೂರು:– ಜಿಲ್ಲೆಯ ಮೂಡಿಗೆರೆಯ ಕೊಟ್ಟಿಗೆಹಾರದಲ್ಲಿ ಯುವಕನೊಬ್ಬನ ಅವಾಂತರಕ್ಕೆ ಪೊಲೀಸರೇ ಬೇಸ್ತುಬಿದ್ದ ಘಟನೆ ಜರುಗಿದೆ. ಅಶೋಕ್ ಎಂಬಾತ ಪೊಲೀಸ್ ಸಹಾಯವಾಣಿ ಸಂಖ್ಯೆ 112ಕ್ಕೆ ಕರೆ ಮಾಡಿ, ಜಗಳವಾಗುತ್ತಿದೆ ಸರ್, ಬೇಗ ಬನ್ನಿ ಎಂದು ಗೋಗರೆದಿದ್ದ. ಆತನ ಕರೆಗೆ ಸ್ಪಂದಿಸಿ ತಕ್ಷಣವೇ ಬಣಕಲ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅಲ್ಲಿಗೆ ತಲುಪಿದ ಪೊಲೀಸರಿಗೆ ಒಂದು ಕ್ಷಣ ಶಾಕ್ ಆಗಿದೆ.
ಸ್ಥಳಕ್ಕೆ ಹೋದ ಪೊಲೀಸರು ಅಶೋಕ್ ಬಳಿ ವಿಚಾರಣೆ ನಡೆಸಿದ್ದಾರೆ. ಅದಕ್ಕೆ ಆತ ನೀಡಿದ ಉತ್ತರದಿಂದ ಶಾಕ್ ಆಗಿದ್ದಾರೆ. ಜಗಳವೂ ಇಲ್ಲ, ಏನೂ ಇಲ್ಲ ಸರ್. ನಾನು ಮಹಾಲಯಕ್ಕೆ ಹೋಗಬೇಕಿದೆ. ಬಸ್ ಸಿಗುತ್ತಿಲ್ಲ, ಸಮವೂ ಆಯಿತು. ಮಳೆ ಬೇರೆ ಬರುತ್ತಿದೆ. ದಯಮಾಡಿ ನೆಂಟರ ಮನೆಗೆ ಡ್ರಾಪ್ ಮಾಡಿ ಎಂದು ಪೊಲೀಸರ ಬಳಿ ಯುವಕ ಗೋಗರೆದಿದ್ದಾನೆ. ಅಷ್ಟೇ ಅಲ್ಲದೆ, ಕೊಟ್ಟಿಗೆಹಾರದಿಂದ ಫಲ್ಗುಣಿ ಗ್ರಾಮಕ್ಕೆ ಡ್ರಾಪ್ ಮಾಡುವಂತೆ ಪಟ್ಟು ಹಿಡಿದಿದ್ದಾನೆ. ಯುವಕನ ಮಾತು ಕೇಳಿ ಶಾಕ್ ಆದ 112 ಪೊಲೀಸರು, ಬುದ್ಧಿ ಹೇಳಿ ಅಶೋಕ್ನನ್ನು ಲಾರಿ ಹತ್ತಿಸಿ ಕಳುಹಿಸಿದ್ದಾರೆ