ಬೆಂಗಳೂರು: ಮುಡಾ ಹಗರಣ ವಿಚಾರವಾಗಿ ಜಟಾಪಟಿ ಜೋರಾಗುತ್ತಿದೆ. ಬೀದಿ ಹೋರಾಟವೇ ನಡೆದಿದೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಪ್ರತಿಪಕ್ಷಗಳು ರಣಕಹಳೆ ಮೊಳಗಿಸಿವೆ. ಮುಖ್ಯಮಂತ್ರಿ ಪರ ಸಾಲು ಸಾಲು ಸಚಿವರು ಅಖಾಡಕ್ಕಿಳಿದಿದ್ದಾರೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ ರಾಜಕೀಯದ ಬಗ್ಗೆ ಕೋಡಿಶ್ರೀಗಳು ಭವಿಷ್ಯ ನುಡಿದ್ದಿದ್ದಾರೆ. ಇದೀಗ ಜೀವರಾಶಿಗಳ ಮೇಲೆ ಉಂಟಾಗುವ ತೊಂದರೆಯ ಬಗ್ಗೆ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ರಾಜ್ಯದಲ್ಲಿ ಇನ್ನೂ ಮುಂದೆ ಹಿಂಗಾರು ಮಳೆ ಹೆಚ್ಚಿದೆ. ಅದರಿಂದ ತೊಂದರೆ ಆಗುವುದು ತಪ್ಪಿದ್ದಲ್ಲ ಎಂದು ತಾವು ಹೇಳಿದ್ದ ಭವಿಷ್ಯವನ್ನು ಪುನಃರುಚ್ಚರಿಸಿದ್ದಾರೆ. ಮುಂದುವರೆದು, ವಿಷ ವಾಯು ಬೀಸಿದ್ದರಿಂದ ಜನರ ಆರೋಗ್ಯದ ಮೇಲೆ ತೊಂದರೆಯಾಗುತ್ತಿದೆ. ಆಕಸ್ಮಿಕ ಮೃತ್ಯುಗಳು ಹೆಚ್ಚಾಗುತ್ತವೆ ಎಂದು ತಿಳಿಸಿದ್ದಾರೆ. ಅಭಿಮನ್ಯವಿನ ಬಿಲ್ಲಿನ ದಾರವನ್ನು ಕರ್ಣನ ಕೈಯಿಂದ ಮೋಸದಿಂದ ಕಟ್ ಮಾಡಿಸುತ್ತಾರೆ. ಮಹಾಭಾರತದಲ್ಲಿ ಕೃಷ್ಣ ಇದ್ದ, ಭೀಮ ಗೆದ್ದ ಆದರೆ ಇಲ್ಲಿ ಕೃಷ್ಣ ಇಲ್ಲ ಆದ್ದರಿಂದ ದುರ್ಯೋದನ ಗೆಲ್ಲುತ್ತಾನೆ. ಅಭಿಮನ್ಯುವಿನ ಹೆಂಡತಿ ರಣರಂಗ ಪ್ರವೇಶ ಮಾಡ್ತಾಳೆ ಎಂದು ತಿಳಿಸಿದ್ದಾರೆ.