ನಿಮಗೂ ನಕಲಿ ಲೋಕಾಯುಕ್ತ ಪೋಲೀಸರ ಪೋನ್ ಬಂದೀತು ಹುಷಾರ..ಸದ್ದಿಲ್ಲದೇ ನಕಲಿ ಲೋಕಾಯುಕ್ತ ಅಧಿಕಾರಿಗಳ ಜಾಲ ಬೇಧಿಸಿದ ಹುಬ್ಬಳ್ಳಿ ಪೋಲೀಸರು.ಇದು ಉದಯ ವಾರ್ತೆ ಬಿಗ್ ಇಂಪ್ಯಾಕ್ಟ್..
ಹುಬ್ಬಳ್ಳಿ:-ಹೌದು ಸದ್ದಿಲ್ಲದೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನೇ ಟಾರ್ಗೇಟ್ ಮಾಡಿದ್ದ ನಕಲಿ ಲೋಕಾಯುಕ್ತ ಪೋಲೀಸ ಟೀಂನ್ನ ಹುಬ್ಬಳ್ಳಿ ಪೋಲೀಸರು ಹೆಡಮುರಿ ಕಟ್ಟಿದ್ದಾರೆ. ಇದು ಉದಯ ವಾರ್ತೆ ಬಿಗ್ ಇಂಪ್ಯಾಕ್ಟ್ ಸ್ಟೋರಿ..
ಏನ್ರೀ ಇದು ಮೊದಲು ಲೋಕಾಯುಕ್ತ ಇನಸ್ಪೆಕ್ಟರ್ ಒಬ್ಬರ ಬ್ರಹ್ಮಾಂಡ ಬ್ರಷ್ಟಾಚಾರ ಅಂತಾ ಸುದ್ದಿ ಮಾಡಿ ಇದೀಗ ನಕಲಿ ಲೋಕಾಯುಕ್ತ ಪೋಲೀಸರು ಅಂತಾ ಹೇಳತಿದ್ದೀರಿ ಅಂತೀರಾ ಅಲ್ಲೇ ಇರೋದು ಟ್ವಿಷ್ಟ್.
ನಾವು ನಿಮಗೆ ಪೋಟೋದಲ್ಲಿ ತೋರಿಸ್ತಿದ್ದೀವಲ್ಲಾ ಇವರೇ ನೋಡ್ರೀ ಲೋಕಾಯುಕ್ತ ಅಧಿಕಾರಿಗಳು.ಇವರು ನಾವು ಲೋಕಾಯುಕ್ತರು ಅಂತಾ ನೌಕರರನ್ನ ಹೆದರಿಸಿ,ಬೆದರಿಸಿ,ಲಕ್ಷ ಲಕ್ಷ ಡೀಲ್ ಮಾಡುವ ನಕಲಿ ಲೋಕಾಯುಕ್ತ ಕಮಂಗಿಗಳು.
ನಿಜವಾಗಲೂ ಉದಯ ವಾರ್ತೆ ಲೋಕಾಯುಕ್ತರು ಅಂತಾ ಬೆನ್ನು ಬಿದ್ದತ್ತು.ಇವರು ಮಾತಾಡೋದನ್ನ ಕೇಳಿದರೆ ಅಸಲಿ ಲೋಕಾಯುಕ್ತ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.ಹಂಗೋ ಹಿಂಗೋ ಮಾಡಿ ಈ ಕಮಂಗಿಗಳ ವಿರುದ್ದ ಹುಬ್ಬಳ್ಳಿ ಉಪನಗರ ಪೋಲೀಸ ಠಾಣೆಯಲ್ಲಿ ದೂರು ದಾಖಲಾಗಿದ್ದೇ ತಡ.ಇಂಚಿಂಚೂ ಮಾಹಿತಿ ಪಡೆದ ಖಡಕ್ ಪೋಲೀಸ ಕಮೀಷನರ್ ಎನ್ ಶಶಿಕುಮಾರ್ ಇನಸ್ಪೆಕ್ಟರ್ ಮಲ್ಲು ಹೂಗಾರ ನೇತೃತ್ವದಲ್ಲಿ ತಂಡ ರಚಿಸಿ ನಕಲಿ ಲೋಕಾಯುಕ್ತ ಅಧಿಕಾರಿಗಳನ್ನ ಹೆಡಮುರಿ ಕಟ್ಟುವಲ್ಲಿ ಯಶಶ್ವಿಯಾಗಿದ್ದಾರೆ.ಇದು ಉದಯ ವಾರ್ತೆ ಬಿಗ್ ಇಂಪ್ಯಾಕ್ಟ್ ಸ್ಟೋರಿ.