ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ: ದಾಸನಿಗೆ ಮತ್ತೆ ಸೆರೆಮನೆ ವಾಸ

Share to all

ಬೆಂಗಳೂರು: ರೇಣುಕಾಸ್ವಾಮಿ ಕೇಸ್‌ನಲ್ಲಿ ದರ್ಶನ್‌ ಅಂಡ್‌ ಗ್ಯಾಂಗ್‌ ಜೈಲು ಸೇರಿದ್ದಾರೆ.  57 ನೇ ಸೆಷನ್ಸ್ ಕೋರ್ಟನ್‌ಲ್ಲಿ ಇಂದು ನಟ ದರ್ಶನ್‌ ಅವರ ಜಾಮೀನು ಅರ್ಜಿ ವಿಚಾರಣೆ ನಡೆದಿದೆ. ಚಿತ್ರದುರ್ಗಾ ಮೂಲದ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ದಾಸ ಸದ್ಯ ಸೆರೆವಾಸ ಅನುಭವಿಸುತ್ತಿದ್ದಾರೆ. ದರ್ಶನ್ ಜಾಮೀನು ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್, ಇಂದು ಎಸ್ ಪಿಪಿ ಪ್ರಸನ್ನ ಕುಮಾರ್ ಅವರ ಸುದೀರ್ಘ ವಾದ ಮಂಡನೆ ಆಲಿಸಿತು ಬಳಿಕ ಅರ್ಜಿ ವಿಚರಣೆಯನ್ನು ನಾಳೆಗೆ ಮುಂದೂಡಿತು.

ಬಳಿಕ ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿತು. ನಾಳೆ ಮಧ್ಯಾಹ್ನ 12:30ಕ್ಕೆ ಜಾಮೀನು ಅರ್ಜಿ ವಿಚಾರಣೆ ಮುಂದೂಡಿ ಕೋರ್ಟ್ ಆದೇಶ ಹೊರಡಿಸಿದೆ. ಬಳ್ಳಾರಿ ಜೈಲಿನಲ್ಲಿ ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ ಇಂದು ಜಾಮೀನು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ನಿರೀಕ್ಷೆ ಹುಸಿಯಾಗಿದ್ದು, ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆಯಾಗಿದೆ.

ನಿನ್ನೆಯಷ್ಟೇ ಬಳ್ಳಾರಿ ಜೈಲಿಗೆ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಬಂದಿದ್ದರು. ದರ್ಶನ್‌ಗೆ ಅಂತ 2 ಬ್ಯಾಗ್‌ನಲ್ಲಿ ಬಟ್ಟೆ, ಡ್ರೈಫ್ರೂಟ್ಸ್‌, ಬೇಕರಿ ತಿನ್ನಿಸುಗಳನ್ನ ತಂದಿದ್ದರು. ವಿಜಯಲಕ್ಷ್ಮಿ ತಂದಿದ್ದ ಬ್ಯಾಗ್‌‌ಗಳನ್ನ ಪೊಲೀಸರು ಇಂಚಿಂಚೂ ಜಾಲಾಡಿ, ಬಳಿಕ ಸಂದರ್ಶಕರ ಕೊಠಡಿಗೆ ಕರೆದೊಯ್ದರು. ವಿಜಯಲಕ್ಷ್ಮಿ ಜೊತೆ ಸುಶಾಂತ್ ನಾಯ್ಡು, ಅನುಷಾ ಶೆಟ್ಟಿ, ರೋಹಿತ್ ಸಹ ಆಗಮಿಸಿದ್ದರು.

 


Share to all

You May Also Like

More From Author