ಮಂಜುಳಾ ಪೂಜಾರ ವಿರುದ್ದ ಸಿಡಿದೆದ್ದ ರೈತ ಮುಖಂಡರು..ಅವಳಿಂದ ಬ್ಲ್ಯಾಕ್ ಮೇಲ್ ಗೆ ಒಳಗಾದವರ ಸಭೆ ಕರೆದ ರೈತ ಮುಖಂಡರು.
ಹಾವೇರಿ:- ರೈತ ಮುಖಂಡೆ,ರೈತರ ಪರವಾಗಿ ಧ್ವನಿ ಎತ್ತುವಳು ಅಂದುಕೊಂಡು ರೈತರಿಗೆ ಅನ್ಯಾಯ ಮಾಡುತ್ತಿದ್ದಾಳೆ ಅಲ್ಲದೇ ಅವಳ ಹೋರಾಟ ಮತ್ತು ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್ ಮಾಡುವುದು ಮಹಿಳೆಯರಿಗೆ ಕೆಟ್ಟ ಹೆಸರು ಬರುತ್ತಿದೆ.ಆ ಹಿನ್ನೆಲೆಯಲ್ಲಿ ಅವಳ ವಿರುದ್ದ ಧ್ವನಿ ಎತ್ತುತ್ತಿದ್ದೇವೆ ಎಂದು ರೈತ ಮುಖಂಡ ಹನಮಂತಪ್ಪ ಕಬ್ಬಾರ ಹೇಳಿದ್ದಾರೆ.
ಹಾವೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹನಮಂತಪ್ಪ.. ಮಂಜುಳಾ ಪೂಜಾರ ವಿರುದ್ದ ಹೋರಾಟಕ್ಕೆ ಸಜ್ಜಾಗಿದ್ದೇವೆ.ಅವಳು ಅನವಶ್ಯಕವಾಗಿ ಶಾಸಕ ವಿನಯ ಕುಲಕರ್ಣಿ ಪ್ರಕರಣದಲ್ಲಿ ನಮ್ಮ ಹೆಸರು ಬಳಸಿಕೊಂಡಿದ್ದಾಳೆ.ಸೋಷಿಯಲ್ ಮೇಡಿಯಾದಲ್ಲಿ ಬೇಕಾಬಿಟ್ಟಿಯಾಗಿ ಮಾತನಾಡಿದ್ದಾಳೆ.ಸಾರ್ವಜನಿಕವಾಗಿ ಮಾತನಾಡಿದರೆ ಅದನ್ನು ಖಂಡಿಸುತ್ತೇವೆ.ಇಂತಹ ಹೋರಾಟಗಾರರಿಂದ ಸಮಾಜ ಹಾಳಾಗುತ್ತಿದೆ ಎಂದರಲ್ಲದೇ
ಅವಳಿಂದ ಯಾರು ಯಾರು ಬ್ಲ್ಯಾಕ್ ಮೇಲ್ ಗೆ ಒಳಗಾಗಿದ್ದಾರೋ ಅವರ ಸಭೆಯನ್ನ ಇದೇ ಮಂಗಳವಾರ ಕರೆದಿದ್ದೇವೆ.ಅಂತಹವರೆಲ್ಲಾ ಸಭೆಗೆ ಬರುವಂತೆ ಮನವಿ ಮಾಡಿದ್ದೇವೆ ಅವಳು ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್ ಮಾಡುವುದು ಹೆಚ್ಚಾಗಿದೆ.ಅಂತಹ ಹೆಣ್ಣು ಮಕ್ಕಳನ್ನು ಹೋರಾಟದಿಂದ ದೂರ ಇಡಲು ನಿರ್ಧರಿಸಿದ್ದೇವೆ.ರಾಜಕೀಯ ಸೇರಿ ಯಾವುದೇ ಹೋರಾಟದಲ್ಲಿ ಅವಳು ಭಾಗವಹಿಸಬಾರದು ಎಂದು ಹೇಳಿದ್ದಾರೆ.