ಹುಬ್ಬಳ್ಳಿ ಪೋಲಿಸರ ಭರ್ಜರಿ ಕಾರ್ಯಚರಣೆ: ಖತರ್ನಾಕ್ ಕಳ್ಳನ ಬಂಧನ: 7 ಲಕ್ಷ 97 ಸಾವಿರ ನಗದು ವಶ.

Share to all

ಹುಬ್ಬಳ್ಳಿ ಪೋಲಿಸರ ಭರ್ಜರಿ ಕಾರ್ಯಚರಣೆ: ಖತರ್ನಾಕ್ ಕಳ್ಳನ ಬಂಧನ: 7 ಲಕ್ಷ 97 ಸಾವಿರ ನಗದು ವಶ.

 

ಹುಬ್ಬಳ್ಳಿ: ಸ್ಕೂಟರ್ ನ ಬ್ಯಾಗ್ ನಲ್ಲಿದ್ದ ನಗದು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದವನನ್ನು ಇಲ್ಲಿನ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದು, ಬಂಧಿತನಿಂದ 7.97 ಲಕ್ಷ ರೂ ಜಪ್ತಿ ಮಾಡಿದ್ದಾರೆ. ಸುನೀಲ್ ಜಾಡ್ ಎಂಬಾತ ಅ. 26ರಂದು ಹಳೆಯ ಬಸ್ ನಿಲ್ದಾಣ ಬಳಿ ಸ್ಕೂಟರ್ ಬ್ಯಾಗ್ ನಲ್ಲಿ 8ಲಕ್ಷ ರೂ. ಇಟ್ಟಿದ್ದ. ನಗದು ಕಳ್ಳತನವಾಗಿದ್ದರ ಕುರಿತು ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ ಪೊಲೀಸ್ ಇನ್ ಸ್ಪೆಕ್ಟರ್ ಎಂ.ಎಸ್. ಹೂಗಾರ ನೇತೃತ್ವದ ತಂಡ ಕಳ್ಳ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.ಇನ್ನೂ ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ ಮಲ್ಲಿಕಾರ್ಜುನ ಹೊಸೂರ, ಸಿಬ್ಬಂದಿಗಳಾದ ಪ್ರಕಾಶ್ ಕಲಗುಡಿ, ಗೂಳೇಶ, ಎಸ್ . ಯಳವತ್ತಿ, ಮಂಜುನಾಥ ಹಾಲವರ, ರೇಣಪ್ಪ ಸಿಕ್ಕಲಗೇರ, ಜ್ಞಾನೇಶ, ಮಾಂಗ, ತರುಣ ಗಡ್ಡದವರ, ಆರೂಢ ಕರೆಣ್ಣವರ ಭಾಗಿಯಾಗಿದ್ದರು. ಇನ್ನೂ ಇವರ ಕಾರ್ಯವೈಖರಿಯನ್ನು ಪೊಲೀಸ ಆಯುಕ್ತರು ಶ್ಲಾಘಿಸಿದ್ದಾರೆ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author