ಹುಬ್ಬಳ್ಳಿ ಗ್ರಾಮೀಣದಲ್ಲಿ ಬಿಳಿ ಕಾರಿನ ಹವಾಲ್ದಾರ್ ಹವಾ…ಅವನು ನಕಲಿ ಪೋಲೀಸಾ…ಅಸಲಿ ಪೋಲೀಸಾ..

Share to all

ಹುಬ್ಬಳ್ಳಿ ಗ್ರಾಮೀಣದಲ್ಲಿ ಬಿಳಿ ಕಾರಿನ ಹವಾಲ್ದಾರ್ ಹವಾ…ಅವನು ನಕಲಿ ಪೋಲೀಸಾ…ಅಸಲಿ ಪೋಲೀಸಾ..

ಹುಬ್ಬಳ್ಳಿ:- ಹುಬ್ಬಳ್ಳಿ ಗ್ರಾಮೀಣ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಆ ಪೋಲೀಸ ಅಂದರೆ ಒಂಥರಾ ಭಯ..ಅಕ್ರಮ ದಂಧೆಕೋರರ ತಾಣಗಳಿಗೆ ಬಿಳಿ ಸ್ವಿಪ್ಟ್ ಡಿಜೈರ್ ಕಾರು ಬಂತೆಂದರೆ ಟಕಾ..ಟಕಾ ಅಂತಾ ರೊಕ್ಕ ಎಣಿಸಲೇಬೇಕು..ಅಷ್ಟೇ ಅಲ್ಲಾ ಹಣದ ಜೊತೆಗೆ ಒಂದು ಬೀರು..ಒಂದು ಎಂಸಿ ಕೊಡಲೇಬೇಕು ಇದು ಪಾಳೇಗಾರನ ಹವಾ…

ಇಡೀ ಹುಬ್ಬಳ್ಳಿ ಗ್ರಾಮೀಣ ಪೋಲೀಸ ಠಾಣಾ ವ್ತಾಪ್ತಿಯಲ್ಲಿಯ ದಾಬಾ..ಸಣ್ಣಪುಟ್ಟ ಸರಾಯಿ ಮಾರುವ ಅಂಗಡಿಗಳಲ್ಲಿ ಇವನದು ತಿಂಗಳಿಗೆ ಒಂದು ಸಾವಿರ ಎಂಎಂ ಹಾಗೂ ಪುಕ್ಕಟೆ ಸರಾಯಿ ಫಿಕ್ಷ್ ಅಂತೆ..ಅವನ ಹವಾ ಕೇಳಿದ ಕೆಲ ಪೋಲೀಸ ಆಪೀಸರ್ ಕೂಡಾ ಹೌ ಹಾರಿದ್ದಾರೆ.

ಹೌದು ಅಷ್ಟಕ್ಕೂ ಎಸ್ಪಿ ಸ್ಕ್ವಾಡ್೯ ಅಂತಾ ಹೇಳಿಕೊಂಡು ಹಗಲು ದರೋಡೆ ಮಾಡುವ ಆ ಪೋಲೀಸ ನಿಜಕ್ಕೂ ಅಸಲಿನಾ ಅಥವಾ ನಕಲಿನಾ ಅನ್ನೋದನ್ನ SP ಸಾಹೇಬ್ರೇ ಹೇಳಬೇಕು..ಅಷ್ಟೇ ಅಲ್ಲದೇ ನಾನು ಆ ಶಾಸಕರ ರಿಲೇಷನ್ ಅಂತಾ ಬೇರೇ ಪುಂಗಿ ಬಿಟ್ಟು ಇದ್ದ ಬಿದ್ದ ಪೋಲೀಸರನ್ನ ಹಾಗೂ ದಂಧೆಕೋರರನ್ನ ಭಯ ಬೀಳಿಸುವ ಈ ಹಗಲು ದರೋಡೆಕೋರನ ವಸೂಲಿಯ ಆಡಿಯೋ..ವಿಡಿಯೋ ಅಸಲಿಯತ್ತನ್ನ ವೀಕ್ಷಿಸಿ ನಿಮ್ಮ ಉದಯ ವಾರ್ತೆಯಲ್ಲಿ..

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author