ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬರತಾ ಇದ್ದಾರೆ ಕೆಎಎಸ್ ಅಧಿಕಾರಿಗಳು..ಸಮುದಾಯ ಸಂಘಟನಾಧಿಕಾರಿಗಳಿಗೆ ಶುರುವಾಗಿದೆ ಡವ..ಡವ..
ಹುಬ್ಬಳ್ಳಿ:-ಬೆಂಗಳೂರು ಬಿಟ್ಟರೆ ರಾಜ್ಯದಲ್ಲಿ ಎರಡನೇ ದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗೆಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ದಶಕಗಳಿಂದ ಗ್ರುಪ್ ಸಿ ದರ್ಜೆಯ ಸಮುದಾಯ ಸಂಘಟನಾಧಿಕಾರಿಗಳದೇ ದರ್ಭಾರ ನಡಿದಿದೆ..ದಶಕಗಳಿಂದಲೂ ಸಮುದಾಯ ಸಂಘಟನಾಧಿಕಾರಿಗಳು ಜೋನಲ್ ಕಮೀಷನರಗಳಾಗಿ ದರ್ಭಾರ ನಡೆಸಿದ್ದಾರೆ.
ದಶಕಗಳಿಂದ ಸಮುದಾಯ ಸಂಘಟನಾಧಿಕಾರಿಗಳು ಜೋನಲ್ ಕಮೀಷನರ್ ಆಗಲು ಬರುವುದಿಲ್ಲಾ ಅಂದರೂ ಅವರನ್ನ ತೆಗೆದು ಅವರ ಯೋಗ್ಯತೆಗೆ ತಕ್ಕ ಕೆಲಸ ಕೊಡಲು ಈವರೆಗೂ ಎಂತಹ ದಕ್ಷ ಕಮೀಷನರ್ ಬಂದರೂ ಸಮುದಾಯ ಸಂಘಟನಾಧಿಕಾರಿಗಳನ್ನ ಮುಟ್ಟುವ ಧೈರ್ಯ ಮಾಡಿಲ್ಲಾ..ಅಷ್ಟೊಂದು ರಾಜಕಾರಣಿಗಳ ಬೆಂಬಲ ಇದೆ ಅಂತೆ ಆ ಅಧಿಕಾರಿಗಳಿಗೆ.
ಈಗ ಒಬ್ಬರ ಹಿಂದೆ ಒಬ್ಬರು ಕೆಎಎಸ್ ಅಧಿಕಾರಿಗಳು ವರ್ಗಾವಣೆ ಮಾಡಿಸಿಕೊಂಡು ಹುಬ್ಬಳ್ಳಿ ಪಾಲಿಕೆಗೆ ಬರತಾ ಇದ್ದಾರೆ..ಕಳೆದ ಒಂದ ವಾರದ ಹಿಂದೆ ಚಿದಂಬರ ಶೇಷಗಿರಿ ರಾವ್ ಕುಲಕರ್ಣಿ ಜೋನ್ -1ಕ್ಕೆ…ಮಲ್ಲಿಕಾರ್ಜುನ ಹೆಗ್ಗಣ್ಣವರ ಜೋನ್ 2ಕ್ಕೆ..ದೊಡ್ಡಪ್ಪ ಹೂಗಾರ..ಜೋನ್ 3ಕ್ಕೆ..ಮೆಹಬೂಬ್ ಜಲಾನಿ ಅವರೂ ಕೂಡಾ ಜೋನ್..3 ಕ್ಕೆ..ಹಾಗೆ ನಿನ್ನೆ ಪ್ರಕಾಶ ನಾಶಿ ಜೋನ್..5 ಕ್ಕೆ ಜೋನಲ್ ಕಮೀಷನರ್ ಅಂತಾ ವರ್ಗಾವಣೆ ಮಾಡಿಸಿಕೊಂಡು ಬಂದಿದ್ದಾರೆ.. ಹೀಗಾಗಿ ಈಗ ಸಮುದಾಯ ಸಂಘಟನಾಧಿಕಾರಿಗಳು ಈಗ ಮುಂದೆ ಏನು ಮಾಡಬೇಕಪ್ಪಾ ಅಂತಾ ಡವ..ಡವಾ ಶುರುವಾಗಿದೆ..