ಪಾಲಿಕೆಯ ಕಮೀಷನರ್ ವರ್ಗಾವಣೆ ವದಂತಿ.. ಬಿಜೆಪಿ ಸುಳ್ಳು ಪ್ರಚಾರ..ಕಾರ್ಪೋರೇಟರ್ ಆರೀಪ್ ಬದ್ರಾಪುರ..
ಹುಬ್ಬಳ್ಳಿ:- ಕಳೆದ ಹಲವು ದಿನಗಳಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮೀಷನರ್ ಡಾ:- ರುದ್ರೇಶ ಘಾಳಿ ಅವರನ್ನ ಕಾಂಗ್ರೆಸ್ ನವರು ವರ್ಗಾವಣೆ ಮಾಡಿಸಲು ಪ್ರಯತ್ನ ನಡೆಸಿದ್ದಾರೆ ಅಂತಾ ಬಿಜೆಪಿಯವರು ಕಾಂಗ್ರೆಸ್ ಮೇಲೆ ಗೂಬೆ ಕೂಡ್ರಿಸುವ ಕೆಲಸ ಮಾಡತಾ ಇದ್ದಾರೆ.ಅದು ಬಿಜೆಪಿಯ ಸುಳ್ಳು ಪ್ರಚಾರ..ಕಾಂಗ್ರೆಸ್ ನಲ್ಲಿ ಯಾರೂ ಅವರ ವರ್ಗಾವಣೆಗೆ ಪ್ರಯತ್ನಿಸುತ್ತಿಲ್ಲಾ ಎಂದು ಪಾಲಿಕೆಯ ಸದಸ್ಯ ಆರೀಪ್ ಬದ್ರಾಪುರ ಹೇಳಿದ್ದಾರೆ..
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಕಮೀಷನರ್ ಡಾ:- ರುದ್ರೇಶ ಘಾಳಿ ಅವರು ಅವಳಿ ನಗರಗಳ ಅಭಿವೃದ್ಧಿಗೆ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಮಹಾನಗರ ಪಾಲಿಕೆ ಬಿಜೆಪಿ ದುರಾಡಳಿತದಿಂದ ಆರ್ಥಿಕವಾಗಿ ಹದಗೆಟ್ಟು ಹೋಗಿತ್ತು.ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದವು.ಗುತ್ತಿಗೆದಾರರ ಬಿಲ್ ನಿಂತು ಹೋಗಿದ್ದವು.
ಪಾಲಿಕೆಯ ಹಣಕಾಸಿನ ವ್ಯವಸ್ಥೆ ಸರಿದಾರಿಗೆ ತರುವ ಮೂಲಕ ಪಾಲಿಕೆಗೆ ಹಿಡಿದ ಹಣಕಾಸಿನ ಗ್ರಹಣ ಬಿಡಿಸಿದ ಕಮೀಷನರ್ ಡಾ:- ರುದ್ರೇಶ ಘಾಳಿ ಅವರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅಭಿವೃದ್ಧಿ ಜೊತೆಗೆ ಸರಕಾರಕ್ಕೂ ಒಳ್ಳೆಯ ಹೆಸರು ತಂದಿದ್ದಾರೆ ಎಂದು ಸದಸ್ಯ ಆರೀಪ್ ಬದ್ರಾಪುರ ಹೇಳಿದ್ದಾರೆ.