ಹುಬ್ಬಳ್ಳಿ ಓಪನ್ ಪ್ಲೇಸನಲ್ಲೇ “ಕೋಳೂರು” ಬೆಂಬಲಿಗನ ಕಿಡ್ನ್ಯಾಪ್..ಡಾಕ್ಟರ್ ಒಬ್ಬರಿಗೆ ಕೋಟಿ.. ಕೋಟಿ ಚೀಟಿಂಗ್..?

Share to all

ಓಪನ್ ಪ್ಲೇಸನಲ್ಲೇ “ಕೋಳೂರು” ಬೆಂಬಲಿಗನ ಕಿಡ್ನ್ಯಾಪ್..ಡಾಕ್ಟರ್ ಒಬ್ಬರಿಗೆ ಕೋಟಿ.. ಕೋಟಿ ಚೀಟಿಂಗ್..?

ಹುಬ್ಬಳ್ಳಿ:- ವೃತ್ತಿಯಲ್ಲಿ ವೈದ್ಯನಾಗಿರೋ ಡಾಕ್ಟರ್ ಗಜಾನನ ಎಂಬುವರಿಗೆ ನಾಲ್ಕು ಕೋಟಿಗೂ ಹೆಚ್ಚು ಹಣ ಚೀಟಿಂಗ್ ಮಾಡಿದ್ದ ಎನ್ನಲಾದ “ಕೋಳೂರ” ವೈದ್ಯರ ಕೈಗೆ ಸಿಗದೇ ಹಾಗೂ ಪೋನೂ ರಿಸೀವ್ ಮಾಡದ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಹುಬ್ಬಳ್ಳಿಯ ಜನನಿಬಿಡ ಪ್ರದೇಶದಿಂದ “ಕೋಳೂರ” ಕಡೆಗೆ ಕೆಲಸ ಮಾಡೋ ಹುಡುಗನನ್ನ ವೈದ್ಯರ ಟೀಂ ಕಿಡ್ನ್ಯಾಪ ಮಾಡಿತ್ತು.

 

https://youtube.com/shorts/HQQkKvntPjI?si=b_46zYe9jRG6uBFy

ಕಿಡ್ನ್ಯಾಪ ವಿಡಿಯೋ ವೈರಲ್ ಆಗತಾ ಇದ್ದಂತೆ ಎಚ್ಚೆತ್ತುಕೊಂಡು ಹುಬ್ಬಳ್ಳಿ-ಧಾರವಾಡ ಪೋಲೀಸರು ಕಿಡ್ನ್ಯಾಪ ಆದ ಒಂದೂವರೆ ಘಂಟೆಯಲ್ಲೇ ಇಡೀ ಹುಬ್ಬಳ್ಳಿ-ಧಾರವಾಡದಲ್ಲಿ ನಾಕಾ ಬಂದಿ ಹಾಕಿ ಕಿಡ್ನ್ಯಾಪ್ ರ್ ಟೀಂ ನ್ನ ಹೆಡಮುರಿ ಕಟ್ಟಿದ್ದಾರೆ..

ಕೋಟಿ ಕೋಟಿ ಹಣ ಚೀಟಿಂಗ್ ಮಾಡಿದ ಪ್ರಮುಖ ಆರೋಪಿ “ಕೋಳೂರ”ಗಾಗಿ ಹುಬ್ಬಳ್ಳಿ-ಧಾರವಾಡ ಪೋಲೀಸ ಟೀಂ ಬಲೆ ಬೀಸಿದೆ..ಡಾಕ್ಟರ ಒಬ್ಬರಿಗೆ ನಾಲ್ಕೂವರೆ ಕೋಟಿ ಹಣ ಚೀಟಿಂಗ್ ಮಾಡಿದ್ದಾರೆ ಎನ್ನಲಾಗಿದೆ.ಇನ್ನೂ ಯಾರು ಯಾರಿಗೆ ಎಷ್ಟು ಚೀಟಿಂಗ್ ಮಾಡಿದ್ದಾನೆ ಕೋಳೂರು.. ಆ ಆಸಾಮಿಯನ್ನ ತಂದಾಗಲೇ ಬಯಲಿಗೆ ಬರಲಿದೆ.

ಕೋಳೂರು ಬಣ್ಣ ಬಯಲು ಮಾಡಲು ಖಡಕ್ ಕಮೀಷನರ್ ಭೂಷಣ ಭೋರ್ಸೆ ಈಗಾಗಲೇ ಖಡಕ್ ಎಸಿಪಿ ಒಬ್ಬರಿಗೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ..ಒಟ್ಟಿನಲ್ಲಿ ಒಂದೂವರೆ ಘಂಟೆಯಲ್ಲಿ ಕಿಡ್ನ್ಯಾಪ್ ಕೇಸ್ ಚೇಸ್ ಮಾಡಿದ ಹುಬ್ಬಳ್ಳಿ ಪೋಲೀಸರಿಗೆ ಹ್ಯಾಂಡ್ಸ್ ಅಪ್ ಹೇಳಲೇ ಬೇಕು..
ಕೋಟಿ ಕೋಟಿ ಚೀಟಿಂಗ್ ನ ಇನ್ನಷ್ಟು ಸುದ್ದಿಗಳನ್ನು ವೀಕ್ಷಿಸಿ ಉದಯ ವಾರ್ತೆಯಲ್ಲಿ…

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author