ಸಿದ್ದರಾಮಯ್ಯ ಅವರಿಗೆ ನಮಗಿಂತ ಜಾಸ್ತಿ ಶತ್ರುಗಳು ಅವರ ಪಕ್ಷದಲ್ಲೇ ಇದ್ದಾರೆ: ಸಚಿವ ವಿ. ಸೋಮಣ್ಣ

Share to all

ತುಮಕೂರು: ಸಿದ್ದರಾಮಯ್ಯ ಅವರಿಗೆ ನಮಗಿಂತ ಜಾಸ್ತಿ ಶತ್ರುಗಳು ಅವರ ಪಕ್ಷದಲ್ಲೇ ಇದ್ದಾರೆ ಎಂದು ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಮಗಿಂತ ಜಾಸ್ತಿ ಶತ್ರುಗಳು ಅವರ ಪಕ್ಷದಲ್ಲೇ ಇದ್ದಾರೆ ಎಂದರು.

ಜಾತಿಗಣತಿ ವರದಿ ಅವೈಜ್ಞಾನಿಕವಾಗಿದೆ ಅಂತ ನಾವು ಹೇಳುತ್ತಿಲ್ಲ. ಕಾಂಗ್ರೆಸ್ ನವರೇ ಹೇಳುತ್ತಿದ್ದಾರೆ. ಈ ವಿಷಯವನ್ನು ಪ್ರತಿಷ್ಟೆಯಾಗಿ ತೆಗೆದುಕೊಳ್ಳುವುದು ಏಕೆ ಎಂದರು. ದೇಶದಲ್ಲಿ ಜನಗಣತಿ ನಡೆಯುತ್ತಿದೆ. ಆಗ ಮಾಡಿಸಿ ಯಾರು ಬೇಡ ಅಂತಾರೆ. ವರದಿ ವೈಜ್ಞಾನಿಕವಾಗಿಲ್ಲ ಅಂತಾ ತುಂಬಾ ಜನ ಬುದ್ದಿಜೀವಿಗಳು ಹೇಳುತ್ತಿದ್ದಾರೆ. ಅದನ್ನು ಪುನರ್‌ಪರಿಶೀಲನೆ ಮಾಡಿದರೆ ದೇಶ ಏನು ಮುಳುಗಿ ಹೋಗುವುದಿಲ್ಲ ಎಂದರು.


Share to all

You May Also Like

More From Author