RCB ಅಭಿಮಾನಿಗಳಿಗೆ ಗುಡ್ ನ್ಯೂಸ್: ತಂಡಕ್ಕೆ ಸ್ಫೋಟಕ ಬ್ಯಾಟರ್ ಎಂಟ್ರಿ!

Share to all

IPL ಮೆಗಾ ಹರಾಜಿಗೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಬಿಗ್ ಅಪ್ಡೇಟ್ ಒಂದು ಹೊರ ಬಿದ್ದಿದ್ದು, ಇದು ಅಭಿಮಾನಿಗಳಿಗೆ ಖುಷಿ ಹೆಚ್ಚಿಸಿದೆ. ಹೌದು, ನಿತೀಶ್​​ ಕುಮಾರ್​ ರೆಡ್ಡಿ ಬಾಂಗ್ಲಾದೇಶ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಲ್ಲೂ ಸಂಚಲನ ಮೂಡಿಸಿದ್ರು. ಬ್ಯಾಟಿಂಗ್‌ನಲ್ಲಿ ನಿತೀಶ್ 34 ಎಸೆತಗಳಲ್ಲಿ 74 ರನ್ ಗಳಿಸಿದ್ದು, ಬರೋಬ್ಬರಿ 7 ಸಿಕ್ಸರ್​​, 4 ಫೋರ್​ ಚಚ್ಚಿದ್ರು. ಬೌಲಿಂಗ್‌ನಲ್ಲಿ 23 ರನ್‌ ನೀಡಿ 2 ಮಹತ್ವದ ವಿಕೆಟ್​ಗಳು ಪಡೆದರು. ಇಂತಹ ಯುವ ಸ್ಟಾರ್​​ ಆಟಗಾರರನ್ನು ಸನ್​ರೈಸರ್ಸ್ ಹೈದರಾಬಾದ್ ತಂಡ ಉಳಿಸಿಕೊಳ್ಳುತ್ತಿಲ್ಲ. ಹಾಗಾಗಿ ಇವರು ಆರ್​​ಸಿಬಿಗೆ ಬರಬಹುದು ಅನ್ನೋ ಮಾತುಗಳು ಕೇಳಿ ಬಂದಿವೆ.

ಸನ್​ರೈಸರ್ಸ್​ ಹೈದರಾಬಾದ್​ ತಂಡವು ಪ್ಯಾಟ್ ಕಮ್ಮಿನ್ಸ್, ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಅವರನ್ನು ರೀಟೈನ್​ ಮಾಡಿಕೊಳ್ಳಲಿದೆ. ನಿತೀಶ್​ ಕುಮಾರ್​ ರೆಡ್ಡಿ ಅವರನ್ನು ಹರಾಜಿಗೆ ಬಿಡುವ ಸಾಧ್ಯತೆ ಇದೆ. ಹೀಗಾದಲ್ಲಿ ಆರ್​​​ಸಿಬಿ ನಿತೀಶ್​​​ ಕುಮಾರ್​ ರೆಡ್ಡಿ ಮೇಲೆ ಮೆಗಾ ಹರಾಜಿನಲ್ಲಿ ಕೋಟಿಗಟ್ಟಲೇ ಹಣ ಸುರಿಯಲಿದೆ.

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ಗೆ ಲೀಗ್​​ ಇನ್ನೇನು ಕೇವಲ 5 ತಿಂಗಳು ಬಾಕಿ ಇದೆ. ಇದಕ್ಕೂ ಮುನ್ನ ಐಪಿಎಲ್​ ಮೆಗಾ ಹರಾಜು ನಡೆಯಲಿದೆ. 6 ಆಟಗಾರರನ್ನು ರೀಟೈನ್​ ಮಾಡಿಕೊಳ್ಳಲು ಐಪಿಎಲ್​​ ತಂಡಗಳಿಗೆ ಬಿಸಿಸಿಐ ಅವಕಾಶ ನೀಡಿದೆ. ಇದರ ಮಧ್ಯೆ ಆರ್​​​ಸಿಬಿಯಿಂದ ಈ ಬಿಗ್​ ಅಪ್ಡೇಟ್​ ಹೊರಬಿದ್ದಿದೆ.

ಇತ್ತೀಚೆಗೆ ಬಾಂಗ್ಲಾದೇಶದ ವಿರುದ್ಧ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಡೆಬ್ಯೂ ಮಾಡಿದ ಟೀಮ್​​ ಇಂಡಿಯಾದ 2ನೇ ಆಟಗಾರ ನಿತೀಶ್ ಕುಮಾರ್ ರೆಡ್ಡಿ. ಇಂಟರ್​ ನ್ಯಾಷನಲ್​ ಕ್ರಿಕೆಟ್​​ಗೆ ಡೆಬ್ಯೂ ಮಾಡಿದ ಕಾರಣ ಇವರು ಅನ್‌ಕ್ಯಾಪ್ಡ್ ಪ್ಲೇಯರ್​​ನಿಂದ ಕ್ಯಾಪ್ಡ್ ಆಟಗಾರ ಆಗಿದ್ದಾರೆ. ಒಟ್ಟಾರೆ ಈ ಆಟಗಾರ RCB ಗೆ ಬಂದ್ರೆ ತಂಡಕ್ಕೆ ಆನೆಬಲ ಬರೋದಂತೂ ಸುಳ್ಳಲ್ಲ.


Share to all

You May Also Like

More From Author