ಉದ್ಯೋಗ ಹರಸಿ ಬೆಂಗಳೂರಿಗೆ ಬಂದಿದ್ದ ಬಾಂಗ್ಲಾದ 9 ಪ್ರಜೆಗಳು ವಶಕ್ಕೆ!

Share to all

ಉಡುಪಿ:- ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಉದ್ಯೋಗಕ್ಕೆಂದು ಬಂದಿದ್ದ ಬಾಂಗ್ಲಾದ 9 ಪ್ರಜೆಗಳು ವಶಕ್ಕೆ ಪಡೆಯಲಾಗಿದೆ.20ಕ್ಕೂ ಹೆಚ್ಚು ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲಾಗಿದ್ದು ದೆಹಲಿಯಲ್ಲಿ ಐವರು, ರಾಜಸ್ಥಾನದಲ್ಲಿ ಮೂವರು, ಉತ್ತರ ಪ್ರದೇಶದಲ್ಲಿ ಇಬ್ಬರು ಪಾಕ್‌ ಪ್ರಜೆಗಳನ್ನು ಬಂಧಿಸಲಾಗಿದೆ. ಇದರ ನಡುವೆ ಇದೀಗ ಉಡುಪಿಯ ಮಲ್ಪೆಯಲ್ಲಿ ಒಂಬತ್ತು ಮಂದಿ ಬಾಂಗ್ಲಾದೇಶಿಯರನ್ನು ವಶಕ್ಕೆ ಪಡೆಯಲಾಗಿದೆ. ಈ ಮೂಲಕ ಭಾರತಕ್ಕೆ ನುಸುಳುಕೋರರ ಆತಂಕ ಎದುರಾಗಿದೆ.

ಮೀನುಗಾರಿಕಾ ಕಾರ್ಮಿಕರಾಗಿ ಉದ್ಯೋಗ ಅರಿಸಿಕೊಂಡು ಬಂದಿದ್ದ ಬಾಂಗ್ಲಾದೇಶೀಯರನ್ನು ಉಡುಪಿ ತಾಲೂಕಿನ ಮಲ್ಪೆ ವಡಬಾಂಡೇಶ್ವರ ಬಸ್ ನಿಲ್ದಾಣ ಬಳಿ ವಶಕ್ಕೆ ಪಡೆಯಲಾಗಿದೆ. ಮೊದಲಿಗೆ ಮಹಮ್ಮದ್ ಮಾಣಿಕ್ ಎಂಬ ವ್ಯಕ್ತಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ತೆರಳಲು ಪ್ರಯತ್ನಿಸಿದ್ದ. ಆಗ ಬಾಂಗ್ಲಾದೇಶದ ಇಮಿಗ್ರಷನ್ ಅಧಿಕಾರಿಗಳ ಪರಿಶೀಲನೆ ವೇಳೆ ಈತ ಬಾಂಗ್ಲಾದೇಶದ ಮಾಣಿಕ್ ಚೌಕ್ ರಾಜಶಾಹಿ ಎಂದು ತಿಳಿದುಬಂದಿತ್ತು. ಬಳಿಕ ಈತನ ವಿಚಾರಣೆ ವೇಳೆ ಇನ್ನೂ ಹಲವರು ಮಲ್ಪೆಯಲ್ಲಿರುವುದು ತಿಳಿದುಬಂದಿದೆ. ಸದ್ಯ ಈಗ ಮಲ್ಪೆಯಲ್ಲಿ ಹಕೀಂ ಅಲಿ, ಸುಜೋನ್, ಇಸ್ಮಾಯಿಲ್, ಕರೀಂ, ಸಲಾಂ, ರಾಜಿಕುಲ್, ಮೊಹಮ್ಮದ್ ಸೋಜಿಬ್, ಕಾಜೋಲ್, ಉಸ್ಮಾನ್ ಸೇರಿದಂತೆ 9 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

ಈ ಆರೋಪಿಗಳು ನಕಲಿ ಭಾರತೀಯ ದಾಖಲಾತಿ ಸೃಷ್ಟಿಸಿ ಉಡುಪಿಗೆ ಪ್ರವೇಶಿಸಿದ್ದರು. ಆರೋಪಿಗಳ ಬಳಿ ನಕಲಿ ಆಧಾರ್ ಕಾರ್ಡ್ ಪತ್ತೆಯಾಗಿದೆ. ಆರೋಪಿಗಳ ಪೈಕಿ ಸಿಕ್ಕಿಂ ಅಗರ್ತಲಾದ ಕಾಜೋಲ್ ಎಂಬಾತ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿದ್ದಾನೆಂದು ತಿಳಿದುಬಂದಿದೆ.


Share to all

You May Also Like

More From Author