ಪೆಟ್ರೋಲ್ ತುಂಬಿದ ಟ್ಯಾಂಕರ್ ಪಲ್ಟಿ ತಪ್ಪಿದ ದೊಡ್ಡ ಅನಾಹುತ.
ಹುಬ್ಬಳ್ಳಿ:
ಹುಬ್ಬಳ್ಳಿಯ ಹೊರವಲಯದ ತಾರಿಹಾಳ ಬೈಪಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ..
ಹುಬ್ಬಳ್ಳಿಯಿಂದ ಡಾವಣಗೇರಿಗೆ ಪೆಟ್ರೋಲ್ ತುಂಬಿಕೊಂಡ ಹೊರಟ ಲಾರಿಯೇ ಪಲ್ಟಿ ಹೊಡೆದಿದೆ.
ಟ್ಯಾಂಕರ ಪಲ್ಟಿ ಹೊಡೆದ ಪರಿಣಾಮ ರಸ್ತೆಯುದ್ದಕ್ಕೂ ಪೆಟ್ರೋಲ್ ಸೋರುತ್ತಿದ್ದು ಯಾವುದೇ ಹಾನಿ ಸಂಭವಿಸಿಲ್ಲಾ.ಆದರೆ
ಸುತ್ತಮುತ್ತಲಿನ ಜನರಲ್ಲಿ ಆಂತಕ ಸೃಷ್ಟಿಯಾಗಿದ್ದು
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಕ್ರಮ ಕೈಕೊಳ್ಳುತ್ತಿದ್ದಾರೆ.
ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ