ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಭಯೋತ್ಪಾದಕರೇ ಬಿಗ್ ಬಾಸ್: ಆರ್ ಅಶೋಕ್ ಕಿಡಿ!

Share to all

ಬೆಂಗಳೂರು:- ಭಯೋತ್ಪಾದಕರ ಸೂಚನೆಗೆ ಮೇರೆಗೆ ಕಾಂಗ್ರೆಸ್ ಸರ್ಕಾರ ಕೆಲಸ ನಿರ್ವಹಿಸುತ್ತದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ. ಫ್ರೀಡಂ ಪಾರ್ಕ್​ನಲ್ಲಿ ನಡೆದ ಪ್ರತಿಭಟನೆ ವೇಳೆ ಮಾತನಾಡಿ, ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಭಯೋತ್ಪಾದಕರೇ ಬಿಗ್ ಬಾಸ್. ಅವರ ಸೂಚನೆಗೆ ಮೇರೆಗೆ ಇವರು ಕಾರ್ಯನಿರ್ವಹಿಸುತ್ತಾರೆ. ಈ ಸರ್ಕಾರ ಭಯೋತ್ಪಾದಕರ ಸೂಚನೆ ಮೇರೆಗೆ ನಡೆಯುತ್ತಿದೆ. ಹುಬ್ಬಳಿಯಲ್ಲಿ ಹಾಕಿದ್ದ ಕೇ್​ಗಳನ್ನು ವಾಪಸ್ ಪಡೆಯಿರಿ ಎಂದು ಅವರು ಸೂಚನೆ ನೀಡಿದರು, ಅದಕ್ಕೆ ಇವರು ವಾಪಸ್ ಪಡೆದಿದ್ದಾರೆ. ಮುಸ್ಲಿಮನರ ಋಣ ತೀರಿಸುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ಅವರ ಮೇಲೆ ಮುಡಾ ಹಗರಣ, ವಾಲ್ಮೀಕಿ ಹಗರಣದ ಆರೋಪ ಬಂದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಸೈಟ್ ವಾಪಸ್ ಕೊಟ್ಟಿದ್ದಾರೆ. ಸಿದ್ದರಾಮಯ್ಯಗೆ ಅವರ ಪಕ್ಷದವರೇ ಬೆಂಬಲ ಕೊಡುತ್ತಿಲ್ಲ. ಮುಸ್ಲಿಮರ ಒಲೈಕೆ ಮಾಡಿ ಉಳಿಯಬೇಕು ಎಂದು ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಅಶೋಕ್ ವಾಗ್ದಾಳಿ ನಡೆಸಿದರು.

ಇವರು ಹಿಂದುಗಳ ಮೇಲಿನ ಕೇಸ್​ಗಳನ್ನು ವಾಪಸ್ಸು ಪಡೆದಿದ್ದಾರಾ? ಸಿಟಿ ರವಿ ಏನ್ ಕೇಸ್ ವಾಪಸ್ಸು ತೆಗಿರಿ ಅಂತಾ ಕೇಳಿಲ್ಲಾ. ಪೊಲೋಸರನ್ನ ಹೊಡೆದು, ಬೆಂಕಿ ಹಚ್ಚಿದವರ ಕೇಸ್ ವಾಪಸ್ಸು ಪಡೆದಿದ್ದಾರೆ. ಬಿಜೆಪಿ ಶಾಸಕ ಮುನಿರತ್ನಗೆ ಜೈಲಾಗಿದೆ. ಆದರೆ, ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಮೇಲೆ ರೇಪ್ ಕೇಸ್ ಆಗಿದೆ, ಅವರಿಗೆ ಯಾಕೆ ಜೈಲಿಲ್ಲಾ ಎಂದು ಅಶೋಕ್ ಪ್ರಶ್ನೆ ಮಾಡಿದ್ದಾರೆ.


Share to all

You May Also Like

More From Author