ಕಲಬುರ್ಗಿ:- ಆಸ್ಪತ್ರೆಯಲ್ಲೂ ಮತಾಂತರಕ್ಕೆ ಯತ್ನಿಸುತ್ತಿದ್ದ ಎಂಬಿಬಿಎಸ್ ವಿದ್ಯಾರ್ಥಿಗೆ ಹಿಂದೂ ಮುಖಂಡರು ತರಾಟೆಗೆ ತೆಗೆದುಕೊಂಡ ಘಟನೆ ಜರುಗಿದೆ. ಕೇರಳ ಮೂಲದ ಎಂಬಿಬಿಎಸ್ ವಿದ್ಯಾರ್ಥಿ ಕಲಬುರಗಿ ಇಎಸ್ಐ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಪ್ರೇರೇಪಿಸುತ್ತಿದ್ದ ವಿಡಿಯೋ ವೈರಲ್ ಆಗಿದೆ.
ಮತಾಂತರಕ್ಕೆ ಪ್ರೆರೇಪಿಸುತ್ತಿದ್ದ ವಿಚಾರ ತಿಳಿದ ಹಿಂದೂ ಸಂಘಟನೆ ಕಾರ್ಯಕರ್ತರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಬಳಿಕ, ವಿದ್ಯಾರ್ಥಿ ಹಿನೋ ಡಾಲಿಚಾನ್ನನ್ನು ಹಿಡಿದು ಪ್ರಶ್ನಿಸಿದಾಗ, ತಾನು ಎಂಬಿಬಿಎಸ್ ವಿದ್ಯಾರ್ಥಿ ಎಂದು ಹೇಳಿದ್ದಾನೆ. ಅಲ್ಲದೇ ತಾನು ಕೇವಲ ಓದಲು ಪೇಪರ್ ನೀಡುತ್ತಿದ್ದೇನೆ ಎಂದು ಹೇಳಿದ್ದಾನೆ.
ಆಗ ಹಿಂದೂ ಸಂಘಟನೆ ಕಾರ್ಯಕರ್ತರು ವಿದ್ಯಾರ್ಥಿಯನ್ನು ಹಿಡಿದು ತಪಾಸಣೆ ನಡೆಸಿದಾಗ, ಆತನ ಬ್ಯಾಗ್ನಲ್ಲಿ ಕ್ರೈಸ್ತ್ ಧರ್ಮದ ಕೆಲ ಅಂಶಗಳು ಮಳಯಾಳಂ ಮತ್ತು ಕನ್ನಡದಲ್ಲಿ ಬರೆದಿರುವ ಪುಸ್ತಕ ಪತ್ತೆಯಾಗಿದೆ. ವಿದ್ಯಾರ್ಥಿ ಹಿನೋ ಡಾಲಿಚಾನ್ನನ್ನು ಹಿಂದೂ ಸಂಘಟನೆ ಕಾರ್ಯಕರ್ತರು ತೀವ್ರ ತರಾಟೆಗೆ ತೆಗೆದುಕೊಂಡರು. ಮತಾಂತರಕ್ಕೆ ಯತ್ನಿಸಿದ ವಿದ್ಯಾರ್ಥಿ ಹಿನೋ ಡಾಲಿಚಾನ್ ವಿರುದ್ಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಗುಲ್ಬರ್ಗಾ ವಿವಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.