ಪ್ರತಿಭಾವಂತ ವಿದ್ಯಾರ್ಥಿನಿಗೆ ನೆರವಾದ ಸಂತೋಷ್ ಲಾಡ್.ಜಪಾನಗೆ ತೆರಳಲು ಧನಸಹಾಯ..

Share to all

*ಪ್ರತಿಭಾವಂತ ವಿದ್ಯಾರ್ಥಿನಿಗೆ ನೆರವಾದ ಸಂತೋಷ್ ಲಾಡ್*
——————————
*ಜಪಾನ್‌ಗೆ ತೆರಳಲು ಧನಸಹಾಯ*
======================
ಧಾರವಾಡ ಜಿಲ್ಲೆಯ ಕುಂದಗೋಳ‌ ತಾಲೂಕಿನ ಕಳಸ ಗ್ರಾಮದ ವಿದ್ಯಾರ್ಥಿನಿ ಪುಟ್ಟವ್ವ ರಮೇಶ ಬಾಲ್ಕೆ ಅವರಿಗೆ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ‌ ಸಚಿವ ಸಂತೋಷ್ ಲಾಡ್ ಅವರು ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ₹ 25,000 ಸಹಾಯಧನ ನೀಡಿದ್ದಾರೆ.

ವಿದ್ಯಾರ್ಥಿನಿಯು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕಳಸದ ಸರಕಾರಿ ಪ್ರೌಢಶಾಲೆಯಲ್ಲಿ10 ನೇ ತರಗತಿ ಓದುತ್ತಿದ್ದು, ಜಪಾನ್‌ನಲ್ಲಿ ನಡೆಯುತ್ತಿರುವ ʼಇನ್‌ಸ್ಪೈರ್ ಅವಾರ್ಡ್ 2023 ಸ್ಪರ್ಧೆʼ ಯಲ್ಲಿ ಭಾಗವಹಿಸುತ್ತಿದ್ದಾಳೆ. ಇದು ಇಡೀ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಈ ವಿದ್ಯಾರ್ಥಿನಿಗೆ ಸಂತೋಷ್‌ ಲಾಡ್‌ ಫೌಂಡೇಶನ್‌ ವತಿಯಿಂದ ನೆರವು ನೀಡಲಾಗಿದೆ.

ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಅಸಂಖ್ಯಾತ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಹೆಣ್ಣು ಮಕ್ಕಳಿಗೆ ಧನಸಹಾಯ ನೀಡಲಾಗುತ್ತಿದೆ. ಲಾಡ್‌ ಅವರ ಕ್ಷೇತ್ರವಲ್ಲದೆ ಇತರೆ ಕ್ಷೇತ್ರದವರಿಗೂ ಧನಸಹಾಯ ಮಾಡಲಾಗುತ್ತಿದೆ.

ʼಜಿಲ್ಲೆಯ ಪ್ರತಿಭೆಗಳು ಬೆಳೆಯಬೇಕು. ನಮ್ಮ ಜಿಲ್ಲೆಯ ಹೆಣ್ಣು ಮಕ್ಕಳು ಸಾಧನೆ ಮಾಡಬೇಕು. ಇಂತಹ ಪ್ರತಿಭಾವಂತರಿಗೆ ಸಹಾಯವನ್ನು ನಿರಂತರವಾಗಿ ಮಾಡಲಾಗುತ್ತಿದೆʼ ಎಂದು ವಿದ್ಯಾರ್ಥಿನಿಗೆ ಲಾಡ್ ಅವರು ಶುಭ ಹಾರೈಸಿದ್ದಾರೆ.


Share to all

You May Also Like

More From Author