ಹುಬ್ಬಳ್ಳಿಯಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿದವರ ಮೇಲೆ‌ ಅರಣ್ಯ ಅಧಿಕಾರಿಗಳ ಕ್ರಮ ಏಕಿಲ್ಲಾ.?

Share to all

ಹುಬ್ಬಳ್ಳಿಯಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿದವರ ಮೇಲೆ‌ ಅರಣ್ಯ ಅಧಿಕಾರಿಗಳ ಕ್ರಮ ಏಕಿಲ್ಲಾ.

ಹುಬ್ಬಳ್ಳಿ:-ಹುಬ್ಬಳ್ಳಿಯಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಐದು ಜನರ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಜೊತೆಗೆ ಉದಯ ವಾರ್ತೆ !!ಹುಬ್ಬಳ್ಳಿಯಲ್ಲಿ ಟೈಗಸ್೯ ಪೆಂಡೆಂಟ್ ಪೋಟೋ ಪುಲ್ ವೈರಲ್!!! ಅಂತಾ ಸುದ್ದಿಯನ್ನು ಕಳೆದ ಶುಕ್ರವಾರವೇ ಪ್ರಸಾರ ಮಾಡಿತ್ತು…

ಸುದ್ದಿ ಪ್ರಸಾರ ಮಾಡಿ ನಾಲ್ಕು ದಿನ ಕಳೆದರೂ ಅರಣ್ಯ ಅಧಿಕಾರಿಗಳು ಈವರೆಗೂ ದಾಳಿ ಮಾಡಿಲ್ಲಾ.ದಾಳಿ ಮಾಡುವುದು ಹೋಗಲಿ ಅವರು ಯಾರು ಏನು ಅಂತಾ ವಿಚಾರಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆ 50 ರ ಅಡಿ ಒಂದು ನೋಟೀಸ್ ಆದರೂ ನೀಡಬೇಕಿತ್ತು. ಅರಣ್ಯ ಅಧಿಕಾರಿಗಳ ಇಂತಹ ನಡೆ ನೋಡಿ ಜನಸಾಮಾನ್ಯರು ಯಾಕೆ ಎಂದು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.

ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅಳಿಯ ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠ ಅವರ ಸುದ್ದಿ ಪ್ರಸಾರವಾದ ಬೆನ್ನಲ್ಲೇ ಅರಣ್ಯ ಅಧಿಕಾರಿಗಳ ದಂಡೇ ಅವರನೆಗೆ ದಾಳಿ ಮಾಡಿ ಹುಲಿ ಉಗುರಿನ ಪೆಂಡೆಂಟ್ ವಶಕ್ಕೆ ಪಡೆದು ನೋಟೀಸ್ ನೀಡಿದ್ದೀರಿ.ಅದೇ ವ್ಯವಸ್ಥೆ ಉಳಿದವರಿಗೇಕಿಲ್ಲಾ ಅಂತಾ ಸಾಮಾನ್ಯರ ಪ್ರಶ್ನೆ.

ಹುಬ್ಬಳ್ಳಿಯಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿದವರ ಪತ್ತೆಗಾಗಿ ಅರಣ್ಯ ಅಧಿಕಾರಿಗಳು ಇವತ್ತಾದರೂ ಪ್ರಯತ್ನ ಮಾಡತಾರಾ ಕಾದು ನೋಡಬೇಕಾಗಿದೆ..

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author