ಹುಲಿ ಉಗರು ಧರಿಸಿದವರ ಮನೆಯಲ್ಲಿ ನಡೆಯುತ್ತಿದೆ ಅರಣ್ಯಾಧಿಕಾರಿಗಳ ಶೋಧ – ಇದು ಉದಯ ವಾರ್ತೆಯ ಬಿಗ್ ಇಂಪ್ಯಾಕ್ಟ್…..ಸಧ್ಯ ಹುಬ್ಬಳ್ಳಿಯಲ್ಲಿ ಈಗಷ್ಟೇ ರೇಡ್
ಹುಬ್ಬಳ್ಳಿ –
ಹುಲಿ ಉಗರು ಧರಿಸಿದವರ ಮನೆಯ ಮೇಲೆ ಹುಬ್ಬಳ್ಳಿಯಲ್ಲಿ ಅರಣ್ಯಾಧಿಕಾರಿಗಳು ಶಾಕ್ ನೀಡಿದ್ದಾರೆ.ಉದಯ ವಾರ್ತೆಯಲ್ಲಿ ಈ ಕುರಿತಂತೆ ವರದಿ ಪ್ರಸಾರವಾದ ಬೆನ್ನಲ್ಲೇ ಕಂಪ್ಲೀಟ್ ಮಾಹಿತಿಯನ್ನು ಪಡೆದುಕೊಂಡ ಅರಣ್ಯಾಧಿಕಾರಿಗಳು ಪೆಂಡೆಂಟ್ ನ ಉಗರನ್ನು ಧರಿಸಿದರವರ ಮನೆಯ ಮೇಲೆ ದಾಳಿಯನ್ನು ಮಾಡಿದ್ದಾರೆ.ಕಳೆದ ಶುಕ್ರವಾರ ಉದಯ ವಾರ್ತೆ ಹುಬ್ಬಳ್ಳಿಯಲ್ಲಿ ಟೈಗರ್ಸ್ ಪೆಂಡೆಂಟ್ ಪೋಟೋ ವೈರಲ್ – ಹುಲಿ ಉಗುರು ಯಾರ ಯಾರ ಕೊರಳಲ್ಲಿ ಅಂತಾ ಎಂಬ ಶೀರ್ಷಿಕೆಯಡಿಯಲ್ಲಿ ವರದಿಯೊಂದನ್ನು ಪ್ರಸಾರ ಮಾಡಿತ್ತು.ಆ ವರದಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಪಂದಿಸಿದ್ದರು ಇದರ ಬೆನ್ನಲ್ಲೆ ಉದಯ ವಾರ್ತೆ ಮತ್ತೊಂದು ಈ ಕುರಿತಂತೆ ಹುಬ್ಬಳ್ಳಿಯಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿದವರ ಮೇಲೆ ಕ್ರಮ ಯಾಕಿಲ್ಲಾ ಅಂತಾ ಸುದ್ದಿ ಪ್ರಸಾರ ಮಾಡಿತ್ತು.ಇಂದು ಸುದ್ದಿ ಪ್ರಸಾರವಾದ ಎರಡು ಘಂಟೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹುಬ್ಬಳ್ಳಿಯಲ್ಲಿ ಪೀಲ್ಡ್ ಗೆ ಇಳಿದು ಹುಲಿ ಉಗರನ್ನು ಇಟ್ಟುಕೊಂಡವರ ಮನೆಗೆ ಎಂಟ್ರಿ ಕೊಟ್ಟು ಶೋಧ ನಡೆಸಿದ್ದಾರೆ.ಹುಬ್ಬಳ್ಳಿ ವಲಯದ ವಲಯಾರಣ್ಯಧಿಕಾರಿ(RFO)ಆರ್.ಎಸ್.ಉಪ್ಪಾರ ನೇತೃತ್ವ ತಂಡವು ಉದ್ಯಮಿಗಳಾದ ವಜ್ರಮುನಿ ಶಿರಕೋಳ,ಅಯ್ಯಪ್ಪ ಶಿರಕೋಳ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈಗಾಗಲೇ
ಎರಡೂ ಹುಲಿ ಉಗುರುಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.ಅರಣ್ಯಧಿಕಾರಿಗಳಿಗೆ ಹುಲಿ ಉಗುರು ಧರಿಸಿದವರು ಹುಲಿ ಉಗುರು ನಕಲಿ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ಅಲ್ಲದೇ
ನಾವು ಇವುಗಳನ್ನು ಜಾತ್ರೆಯಲ್ಲಿ ಖರೀದಿ ಮಾಡಿದ್ದೆವೆಂದು ವಜ್ರಮುನಿ ಮತ್ತು ಅಯ್ಯಪ್ಪ.ಶಿರಕೋಳ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ.ಮೊನ್ನೆ ತಾನೇ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿದ್ದವು.ಈ ಬಗ್ಗೆ ಉದಯ ವಾರ್ತೆ ಕೂಡಾ ಕಂಪ್ಲೀಟ್ ಮಾಹಿತಿಯೊಂದಿಗೆ ಸುದ್ದಿ ಪ್ರಸಾರ ಮಾಡಿತ್ತು.
ಈ ಹಿನ್ನೆಲೆ ಅರಣ್ಯಧಿಕಾರಿಗಳು ಹುಲಿ ಉಗುರು ಪೆಂಡೆಂಟ್ ಹಾಕಿದವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಇದು ಉದಯ ವಾರ್ತೆ ಇಂಪ್ಯಾಕ್ಟ್ ಸ್ಟೋರಿಯಾಗಿದ್ದು ಸಧ್ಯ ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದು ಏನೇನು ವಶಕ್ಕೆ ತಗೆದುಕೊಂಡು ಹುಲಿ ಉಗರುಗಳು ನಕಲಿನಾ ಅಸಲಿನಾ ಎಂದು ಹೇಳ್ತಾರೆ ಎಂಬೊದನ್ನು ಕಾದು ನೋಡಬೇಕಿದೆ.
ಉದಯ ವಾರ್ತೆ ಹುಬ್ಬಳ್ಳಿ