ಕೆಲಸ ಕೊಟ್ಟ ಅನ್ನದಾತರಿಗೆ ತನ್ನ ಮೂತ್ರ ಬೆರೆಸಿ ರೊಟ್ಟಿ ತಯಾರಿಸುತ್ತಿರುವ ವೇಳೆ ಸಿಕ್ಕಿಬಿದ್ದ ಮನೆಕೆಲಸದಾಕೆ!

Share to all

ಉತ್ತರ ಪ್ರದೇಶ:- ಮನೆಕೆಲಸದಾಕೆ ಓರ್ವಳು ಓನರ್‌ ಮನೆಯವರಿಗೆಯೇ ಹಿಟ್ಟಿನಲ್ಲಿ ಮೂತ್ರ ಬೆರೆಸಿ ರೊಟ್ಟಿ ತಯಾರಿಸಿ ಕೊಟ್ಟ ಘಟನೆ ಜರುಗಿದೆ. ಆಕೆಯ ಈ ದುಶ್ಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗಿದೆ.

ಈ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದಿದ್ದು, ಇಲ್ಲಿನ ಥಾನಾ ಕ್ರಾಸಿಂಗ್‌ ರಿಪಬ್ಲಿಕ್‌ ಪ್ರದೇಶದ ಫ್ಲಾಟ್‌ ಒಂದರಲ್ಲಿ ವಾಸವಿರುವ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರ ಮನೆಯಲ್ಲಿ ಮನೆಕೆಲಸದಾಕೆ ತನ್ನ ಮೂತ್ರ ಬೆರೆಸಿ ರೊಟ್ಟಿ ತಯಾರಿಸುತ್ತಿದ್ದ ವೇಳೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾಳೆ. ರೀನಾ ಹೆಸರಿನ ಆ ಮಹಿಳೆ ಕಳೆದ 8 ವರ್ಷದಿಂದ ಈ ಉದ್ಯಮಿಯ ಮನೆಯಲ್ಲಿಯೇ ಕೆಲಸವನ್ನು ಮಾಡುತ್ತಿದ್ದು, ಇದೀಗ ಆಕೆ ಉಂಡ ಮನೆಗೆಯೇ ದ್ರೋಹ ಬಗೆಯುವ ಕೆಲಸವನ್ನು ಮಾಡಿದ್ದಾಳೆ.

ಉದ್ಯಮಿಯ ಮನೆಯವರು ಕೆಲ ತಿಂಗಳುಗಳಿಂದ ನಿರಂತರವಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು. ಅಷ್ಟೇ ಅಲ್ಲದೇ ಅವರು ಯಕೃತ್ತಿನ ಸೋಂಕಿಗೂ ತುತ್ತಾಗಿದ್ದರು. ಆದರೆ ಆರೋಗ್ಯದಲ್ಲಿ ಇಷ್ಟರಮಟ್ಟಿಗೆ ಏರುಪೇರು ಆಗಲು ಕಾರಣ ಏನೆಂಬುದು ಮನೆಯವರಿಗೆ ತಿಳಿಯಲಿಲ್ಲ. ನಂತರ ಒಂದು ದಿನ ಅಡುಗೆ ಮನೆಯಲ್ಲಿ ಮೊಬೈಲ್‌ ಕ್ಯಾಮರಾದಲ್ಲಿ ಗುಟ್ಟಾಗಿ ರೆಕಾರ್ಡಿಂಗ್‌ ಮಾಡುವ ವೇಳೆ ಮನೆಕೆಲಸದಾಕೆ ಪಾತ್ರೆಗೆ ಮೂತ್ರ ವಿಸರ್ಜಿಸಿ ಅದೇ ಮೂತ್ರದಲ್ಲಿ ರೊಟ್ಟಿ ತಯಾರಿಸಿದ ಆಘಾತಕಾರಿ ಸಂಗತಿ ಬಯಲಾಗಿದೆ. ಕೂಡಲೇ ಮನೆಯವರು ಮನೆಕೆಲಸದಾಕೆಯ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.


Share to all

You May Also Like

More From Author