ಮಹಾನಗರ ಪಾಲಿಕೆಯಲ್ಲಿ ಬೇರೇ ಇಲಾಖೆಯಿಂದ ನಿಯೋಜನೆಗೊಂಡ ಅಧಿಕಾರಿಗಳು ಮಾತೃ ಇಲಾಖೆಗೆ ವಾಪಾಸ್ಸು..ಸರಕಾರದ ಮಹತ್ವದ ಆದೇಶ..ಬಹಳ ವರ್ಷಗಳಿಂದ ಪಾಲಿಕೆಯಲ್ಲಿ ತಳವೂರಿರುವ ಅಧಿಕಾರಿಗಳಿಗೆ ಸುರುವಾಯಿತು ಡವ..ಡವ..
ಹುಬ್ಬಳ್ಳಿ:- ಹೌದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಳೆದ ಹಲವು ವರ್ಷಗಳಿಂದ ಬೇರೇ ಬೇರೆ ಇಲಾಖೆಯಿಂದ ನಿಯೋಜನೆ ಮೇಲಿರುವ ಅಧಿಕಾರಿಗಳು ಹಾಗೂ ನೌಕರರು,ನಿಯೋಜನೆ ಅವಧಿ ಮುಗಿದವರನ್ನು ತಕ್ಷಣದಿಂದ ಮಾತೃ ಇಲಾಖೆಗೆ ಹಿಂದಿರುಗಿಸಬೇಕೆಂದು ಸರಕಾರ ಮಹತ್ವದ ಆದೇಶ ಹೊರಡಿಸಿದೆ.
ನಾಗರಿಕ ಸೇವಾ ನಿಯಮಗಳನ್ವಯ ಗರಿಷ್ಠ ನಿಯೋಜನಾವಧಿ ಮುಕ್ತಾಯಗೊಂಡಿದ್ದರೂ ಮಹಾನಗರ ಪಾಲಿಕೆಗಳಲ್ಲಿ ಕರ್ತವ್ಯದಲ್ಲಿ ಮುಂದುವರೆದಿರುವ ಹಾಗೂ ಮೂಲ ವೇತನ ಶ್ರೇಣಿಗಿಂತ 2/3 ವೇತನ ಶ್ರೇಣಿಗಳ ವ್ಯತ್ಯಾಸವಿರುವ ಹುದ್ದೆಯಲ್ಲಿ ಕರ್ತವ್ಯ ನಿರ್ವಹಸುತ್ತಿರುವ ಅಧಿಕಾರಿ ಹಾಗೂ ನೌಕರರನ್ನು ಪಾಲಿಕೆಯಿಂದ ಬಿಡುಗಡೆಗೊಳಿಸಿ ಮಾತೃ ಇಲಾಖೆಗೆ ಹಿಂದಿರುಗಿಸುವಂತೆ ನಗರಾಭಿವೃದ್ಧಿ ಇಲಾಖೆಯ ಸರಕಾರದ ಅದೀನ ಕಾರ್ಯದರ್ಶಿ ನಾಗೇಶ.ಕೆ ಆದೇಶ ಮಾಡಿದ್ದಾರೆ.