ರಾಜಧಾನಿ ಬೆಂಗಳೂರಿನಲ್ಲಿ ಡಬಲ್ ಮರ್ಡರ್! ಪ್ರಿಯಕರನ ಜೊತೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಮಹಿಳೆ

Share to all

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಡಬಲ್ ಮರ್ಡರ್ ನಡೆದಿದ್ದು, ಹೆಂಡತಿ ಶೀಲ ಶಂಕಿಸಿದ ಗಂಡ ಪತ್ನಿ ಹಾಗೂ ಆಕೆಯ ಲವರ್ ನನ್ನು ಭೀಕರವಾಗಿ ಕೊಂದು ಬಿಟ್ಟಿದ್ದಾನೆ. ಬಳಿಕ ಘಟನೆಯಿಂದ ಮನನೊಂದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಘಟನೆ ನಡೆದಿರೋದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ. ಎಸ್, ನಗರದ ಕೋಣನಕುಂಟೆ ಪೋಲಿಸ್ ಠಾಣಾ ವ್ಯಾಪ್ತಿಯ ಆರ್ ಬಿ ಐ ಲೇಔಟ್ ಸಮೀಪದ ಸೋಮೇಶ್ವರ ಬಡಾವಣೆಯಲ್ಲಿ ಘಟನೆ ಜರುಗಿದ್ದು, ಈ ಮೂಲಕ ಅಕ್ರಮ ಸಂಬಂಧಕ್ಕೆ ಮೂವರ ಹೆಣ ಬಿದ್ದಂತಾಗಿದೆ.   ನಿರ್ಮಾಣ ಹಂತದ ‌ಕಟ್ಟಡದಲ್ಲಿ‌ ಈ ಹತ್ಯೆ ನಡೆದಿದ್ದು, ಪತ್ನಿ ಪೈತಮ್ಮ ಮೇಲೆ ಆಗಾಗ ಗೊಲ್ಲಬಾಬು ಅನುಮಾನ ವ್ಯಕ್ತ ಪಡಿಸಿದ್ದ.

ನಿನ್ನೆ ತಡರಾತ್ರಿಯಲ್ಲಿ ಗಣೇಶ್ ಕುಮಾರ್ ಜತೆಗಿದ್ದಾಗಲೇ ಪೈತಮ್ಮ ಪತಿಗೆ ಸಿಕ್ಕಿಬಿದ್ದಿದ್ದಳು. ಮೊದಲಿಗೆ ಮರದ ತುಂಡಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಗಂಡ ಕೊಲೆ ಮಾಡಿದ್ದಾನೆ. ಬಳಿಕ ತಾನೂ ಸೂಸೈಡ್ ಮಾಡಿಕೊಂಡು ಪ್ರಾಣ ಬಿಟ್ಟಿದ್ದಾನೆ.  ಕೂಡಲೇ ಸ್ಥಳಕ್ಕೆ ಕೋಣನಕುಂಟೆ ಪೋಲಿಸರು ‌ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.


Share to all

You May Also Like

More From Author