ವ್ಹಾಲಿಬಾಲ್ ಆಡಿದ ಕಾರ್ಮಿಕ ಸಚಿವ ಸಂತೋಷ ಲಾಡ್ .ಕ್ರೀಡಾಪಟುಗಳಿಗೆ ಹುಮ್ಮಸ್ಸು ತುಂಬಿದ ಸಚಿವರು.

Share to all

ವ್ಹಾಲಿಬಾಲ್ ಆಡಿದ ಕಾರ್ಮಿಕ ಸಚಿವ ಸಂತೋಷ ಲಾಡ್ .ಕ್ರೀಡಾಪಟುಗಳಿಗೆ ಹುಮ್ಮಸ್ಸು ತುಂಬಿದ ಸಚಿವರು.

ಕಲಘಟಗಿ –

ಕಾರ್ಮಿಕ ಸಚಿವ ಸಂತೋಷ ಲಾಡ್ ಅವರಿಗೆ ಕ್ರೀಡೆ ಅಂದರೆ ಎಲ್ಲಿಲ್ಲದ ಹುಮ್ಮಸ್ಸು.ಇಂದು ಕಾಲೇಜು ಕ್ರೀಡಾಕೂಟದಲ್ಲಿ ಉದ್ಘಾಟಕರಾಗಿದ್ದ ಸಚಿವ ಸಂತೋಷ.ಲಾಡ್ ವ್ಹಾಲಿಬಾಲ್ ಆಡುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿ ಕ್ರೀಡಾಪಟುಗಳಲ್ಲೂ ಹುಮ್ಮಸ್ಸು ತುಂಬಿದರು.

ಹೌದು ಕಲಘಟಗಿ ತಾಲೂಕಿನ ಗಳಗಿ ಹುಲಕೊಪ್ಪದ ಶ್ರೀಮತಿ ಶಿವರಾಜದೇವಿ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ 2023-24 ನೇ ಸಾಲಿನ ಧಾರವಾಡ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ವಾಲಿಬಾಲ್‌ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.ತಾವೇ ಸ್ವತಃ ಮೈದಾನದಕ್ಕಿಳಿದ ಸಚಿವರು ಅಂಕಣದಲ್ಲಿ ವಾಲಿಬಾಲ್ ಹೊಡೆದು ವಿಶೇಷವಾಗಿ ಚಾಲನೆ ನೀಡಿದರು.ಇದರೊಂದಿಗೆ ಮೈದಾನದಲ್ಲಿ ಈ ಮೂಲಕ ವಾಲಿಬಾಲ್‌ ಆಟವಾಡಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ ಹುರುದುಂಬಿಸಿದರು.ಸಚಿವರೊಂದಿಗೆ ಪಕ್ಷದ ಮುಖಂಡರು ಕಾರ್ಯಕರ್ತರು ಅಧಿಕಾರಿಗಳು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಉದಯ ವಾರ್ತೆ ಕಲಘಟಗಿ


Share to all

You May Also Like

More From Author