ಹುಬ್ಬಳ್ಳಿ: ಮಹಾನಗರ ಪಾಲಿಕೆಯು ರಾಜ್ಯೋತ್ಸವದ ಅಂಗವಾಗಿ ಕೊಡ ಮಾಡುವ ಧೀಮಂತ ಪ್ರಶಸ್ತಿಗೆ ಪತ್ರಿಕೋದ್ಯಮ ವಿಭಾಗದಲ್ಲಿ ಹಿರಿಯ ವರದಿಗಾರ ಪ್ರಕಾಶ.ನೂಲ್ವಿಅವರನ್ನ ಆಯ್ಕೆ ಮಾಡುವ ಮೂಲಕ, ಪ್ರಶಸ್ತಿಯ ಗೌರವವನ್ನ ಹೆಚ್ಚಿಸಲಾಗಿದೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬೆಲವಂತರ ಗ್ರಾಮದಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಪ್ರಕಾಶ ನೂಲ್ವಿ ಕಲಘಟಗಿಯಲ್ಲಿ ಸಂಜೆವಾಣಿ ತಾಲೂಕಾ ವರದಿಗಾರರಾಗಿ ವ್ರತ್ತಿ ಆರಂಭಿಸಿದ ಅವರು ನಂತರ ಕಾಲಿಟ್ಟಿದ್ದು TV-9 ವರದಿಗಾರರಾಗಿ.
ಗದಗ,ಕೊಪ್ಪಳ, ಹುಬ್ಬಳ್ಳಿಯಲ್ಲಿ ಟಿವಿ-9 ವರದಿಗಾರರಾಗಿ ಕೆಲಸ ಮಾಡುವಾಗಲೇ ದೇಶದಲ್ಲಿಯೇ ಪತ್ರಿಕೋದ್ಯಮಕ್ಕೆ ಕೊಡಮಾಡುವ ರಾಮನಾಥ ಗೋಯಾಂಕಾ ಅವಾಡ್೯ನ್ನು ಮುಡಿಗೇರಿಸಿಕೊಂಡ ಉತ್ತರ-ಕರ್ನಾಟಕದ ಮೊದಲ ವರದಿಗಾರರ ಎಂದೆನಿಸಿಕೊಂಡವರು ಪ್ರಕಾಶ ನೂಲ್ವಿ.
ಯಾವುದೇ ಪ್ರಶಸ್ತಿಯನ್ನು ಲಾಬಿ ಮಾಡಿ ಪಡೆದವರಲ್ಲ.ಹಿಂದೆಯೂ ರಾಮನಾಥ ಗೋಯೆಂಕಾ ಅವಾಡ್೯ ಸಹ ಮಹಿಳೆಯರ ಮಾರಾಟ ಜಾಲ ಎಂಬ ವರದಿಗೆ ಅರಿಸಿ ಬಂದರೆ, ಈಗ ನ್ಯೂಸ್ ಪಸ್ಟ ನ್ಯೂಸ್ ಚಾನಲ್ ದಲ್ಲಿ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದು ಅವರಿಗೆ ಇವತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕೊಡಮಾಡುವ ಧೀಮಂತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪತ್ರಿಕೋದ್ಯಮದಲ್ಲಿ ಅಷ್ಟೇ ಅಲ್ಲದೇ ಇವರು ಸಕಲ ಕಲಾವಲ್ಲಭರು ಅನ್ನೋದಕ್ಕೆ ಇವರು ಮಾಡುವ ನಾಟಕ,ಭಾಷಣ ಸೇರಿದಂತೆ ಹಲವು ರಂಗದಲ್ಲಿ ಪರಿಣಿತಿ ಪಡೆದವರಾಗಿದ್ದಾರೆ.
ಇವರಿಗೆ ಪ್ರಶಸ್ತಿ ಹುಡುಕಿಕೊಂಡು ಬಂದಿರುವುದರಿಂದ ಅವರಿಗೆ ಒಂದು ಅಭಿನಂದನೆ ಸಲ್ಲಿಸಲೇಬೇಕು.
ಉದಯ ವಾರ್ತೆ ಹುಬ್ಬಳ್ಳಿ.