ಮಾಜಿ ಸಚಿವ ಮುನಿರತ್ನಗೆ ಸಂಕಷ್ಟ: ಸ್ವಪಕ್ಷದವರಿಂದಲೇ ಕಮಿಷನರ್ ಗೆ ದೂರು!

Share to all

ಬೆಂಗಳೂರು:- ಇತ್ತೀಚೆಗಷ್ಟೇ ಅತ್ಯಾಚಾರ ಪ್ರಕರಣದಲ್ಲಿ ಕೋರ್ಟ್ ನಿಂದ ಬೇಲ್ ಮೇಲೆ ಹೊರ ಬಂದಿರುವ ಮುನಿರತ್ನಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ನಕಲಿ ವೋಟರ್ ಐಡಿ ಪ್ರಕರಣ ಸಂಭಂದ ಬಿಜೆಪಿ ಎಂಎಲ್‌ಸಿ ತುಳಸಿ ಮುನಿರಾಜು ರಿಂದಲೇ ಕಮಿಷನರ್ ಗೆ ದೂರು ಸಲ್ಲಿಕೆ ಆಗಿದೆ.

ದೂರು ಕೊಟ್ಟ ಬಳಿಕ ಎಂಎಲ್‌ಸಿ ತುಳಸಿ ಮುನಿರಾಜು ಮಾತನಾಡಿ 2018ರ ಚುನಾವಣೆಯ ವೇಳೆ ಸಿಕ್ಕಂತಹ ನಕಲಿ ವೋಟರ್ ಐಡಿ ಪ್ರಕರಣ ಇದಾಗಿದ್ದು, ಇದುವರೆಯ ಆಪ್ರಕರಣದ ತನಿಖೆ ಸರಿಯಾಗಿ ಆಗಿಲ್ಲ. ಉಚ್ಚನ್ಯಾಯಾಲಯ ಸೂಚನೆ ಇದ್ರೂ ತನಿಖೆಯಾಗಿಲ್ಲ. ನ್ಯಾಯಾಲಯದಲ್ಲಿ ತೀರ್ಪು ತನಿಖೆ ಮಾಡುವಂತೆ ತೀರ್ಪು ಬಂದರೂ ಕೂಡ ತನಿಖೆ ಮಾಡಿಲ್ಲ.

ಜಾಲ ಹಳ್ಳಿಯಲ್ಲಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಾಲಹಳ್ಳಿ ಠಾಣೆಗೆ ತೆರಳಿ ನಾನು ಪ್ರತ್ಯಕ್ಷ ಸಾಕ್ಷಿ ಇದ್ದೀನಿ ನನ್ನ ಹೇಳಿಕೆ ತೆಗೆದು ಕೊಳ್ಳಿ ಎಂದರೂ ತನಿಖೆ ಮಾಡಿಲ್ಲ. ನಾನು ಆರು ವರ್ಷದಿಂದ ಹೋರಾಟ ಮಾಡ್ತೀದ್ದೇನೆ. ರಾಕೇಶ್ ಎನ್ನುವ ಸಾಕ್ಷೀಯನ್ನ ಬೆದರಿಸಿ ಜೊತೆಗೆ ಸೇರಿಸಿಕೊಂಡಿ ದೂರು ಹಿಂತೆಗೆಸಿಕೊಂಡಿದ್ದಾರೆ. ಿರಿಯ ಐಪಿಎಸ್ ಅಧಿಕಾರಿ ನೇಮಿಸಿ ತನಿಖೆ ಮಾಡ್ಬೇಕು ಎಂದು ನ್ಯಾಯಾಲಯ ಆದೇಶ ಮಾಡಿತ್ತು. ಅದರೆ ಇದುವರೆಗೂ ತನಿಖೆ ಸರಿಯಾಗಿ ನಡೆದಿಲ್ಲ. ಹೀಗಾಗಿ ಸೂಕ್ತ ತನಿಖೆಗಾಗಿ ದೂರು ಕೊಟ್ಟಿದ್ದೇನೆ ಎಂದಿದ್ದಾರೆ.


Share to all

You May Also Like

More From Author