ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಬಿಯರ್ ವೇಗವಾಗಿ ಮಾರಾಟವಾಗಿದೆ. ಈ ಹಿಂದಿನ ದಾಖಲೆಗಳು ಉಡಿಸ್ ಆಗಿವೆ. ಬಿಯರ್ ಮಾರಾಟ ವರ್ಷದಿಂದ ವರ್ಷಕ್ಕೆ ಶೇ49 ರಷ್ಟು ಏರಿಕೆಯಾಗುತ್ತಿದೆ. ಆದರೆ, ಭಾರತೀಯ ನಿರ್ಮಿತ ಮದ್ಯ ಮಾರಾಟ ಶೇ4.76ರಷ್ಟು ಮಾತ್ರ ಹೆಚ್ಚಳವಾಗಿದೆ.
ಹೆಚ್ಚು ಬಿಯರ್ ಮಾರಾಟಕ್ಕೆ ಕಾರಣ ಬೆಂಗಳೂರಿನಲ್ಲಿರುವ ಪಬ್ಗಳಲ್ಲಿ ಅತಿಯಾಗಿ ಬಿಯರ್ ಮಾರಾಟ ಮಾಡುವುದು. ಬಿಯರ್ ಅಗ್ಗದ ದರದಲ್ಲಿ ನಗರದ ಎಲ್ಲಕಡೆ ಸಿಗುವುದರಿಂದ. ಏರುತ್ತಿರುವ ಬಿಸಿಲಿನ ತಾಪಮಾನದಿಂದ ಬಿಯರ್ ಕುಡಿಯುವವರ ಸಂಖ್ಯೆ ಏರಿಕೆಯಾಗಿದೆ.
ಕೊರೊನಾ ಸಮಯದಲ್ಲಿ ಬಿಯರ್ ಮಾರಾಟ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿತ್ತು. 2020-21 ಕೊರೊನಾ ಸಂದರ್ಭದಲ್ಲಿ ಬಿಯರ್ ಮಾರಾಟ ಶೇ 32.13 ರಷ್ಟು ಕುಸಿದಿತ್ತು. ಆ ವರ್ಷ, ನಗರದಲ್ಲಿ ಕೇವಲ 6.05 ಕೋಟಿ ಲೀಟರ್ ಬಿಯರ್ ಮಾರಾಟವಾಗಿತ್ತು.
2021-22ರಲ್ಲಿ ಕೊರೊನಾ ಅಲೆ ಅಲ್ಪ ಮಟ್ಟಿಗೆ ಕಡಿಮೆಯಾಗಿದ್ದರಿಂದ ಪಬ್ ಮತ್ತು ಬಾರ್ಗಳ ಬಾಗಿಲು ತೆರೆದುಕೊಂಡವು. ಆ ವರ್ಷ, 6.79 ಕೋಟಿ ಲೀಟರ್ ಮಾತ್ರ ಬಿಯರ್ ಮಾರಾಟವಾಯ್ತು. ಆದರೆ, 2022-23ರಲ್ಲಿ ಚಿತ್ರಣ ಬದಲಾಯ್ತು. ಆ ವರ್ಷ, ನಗರದಲ್ಲಿ 10.17 ಕೋಟಿ ಲೀಟರ್ ಬಿಯರ್ ಮಾರಾಟವಾಯ್ತು. 2020 ಮತ್ತು 21ಕ್ಕಿಂತ 2022-23ನೇ ಸಾಲಿನಲ್ಲಿ ಶೇ49 ರಷ್ಟು ಬಿಯರ್ ಮಾರಾಟದಲ್ಲಿ ಏರಿಕೆಯಾಯಿತು.
ಮೈಸೂರು ಗ್ರಾಮಾಂತರದಲ್ಲಿ 2022-23 ರಲ್ಲಿ ಬಿಯರ್ ಮಾರಾಟವು ಶೇ 69.9 ರಷ್ಟು ಹೆಚ್ಚಾಗಿದೆ. 2021-22 ರಲ್ಲಿ 2,757 ಕೋಟಿ ರೂ.ನಷ್ಟು ಬಿಯರ್ ಮಾರಾಟವಾಗಿತ್ತು. 2023-24ರಲ್ಲಿ 5,703 ಕೋಟಿ ರೂ.ನಷ್ಟು ಬಿಯರ್ ಮಾರಾಟವಾಗಿದೆ.