ಧರೆ ಹತ್ತಿ ಉರಿಯುವಾಗ ಶಾಸಕರ ಕೌಟುಂಬಿಕ ವಿದೇಶ ಪ್ರವಾಸ…!!!
ನವಲಗುಂದ: ಇಡೀ ನವಲಗುಂದ ವಿಧಾನಸಭಾ ಕ್ಷೇತ್ರವೇ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತತ್ತರಿಸಿ ಹೋಗಿರುವ ಸಮಯದಲ್ಲಿ ಹಾಲಿ ಶಾಸಕರು ಕೌಟುಂಬಿಕವಾಗಿ ವಿದೇಶ ಪ್ರವಾಸ ಕೈಗೊಂಡಿರುವುದು ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕಳೆದ ಒಂದು ವಾರದ ಹಿಂದೆ ಹನಸಿ ಗ್ರಾಮದಲ್ಲಿ ಮನೆ ಬಿದ್ದು ಮಂಗಳಾ ಪಾಟೀಲ ಎಂಬ ಮಹಿಳೆ ಚಿಕಿತ್ಸೆ ಫಲಿಸದೇ ಕಿಮ್ಸನಲ್ಲಿ ಸಾವಿಗೀಡಾದರು. ಅವರ ಸೊಸೆ ಈಗಲೂ ಕಿಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಅಲ್ಲಿಗೆ ಸ್ಥಳೀಯ ಶಾಸಕ ಎನ್.ಎಚ್.ಕೋನರೆಡ್ಡಿಯವರು ಹೋಗಲೇ ಇಲ್ಲ. ಇಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಐದು ಲಕ್ಷ ಪರಿಹಾರವನ್ನ ಸರಕಾರ ಘೋಷಣೆ ಮಾಡಿರುವುದನ್ನ ಹಾಕಿಕೊಂಡಿದ್ದಾರೆ.
ನವಲಗುಂದ ಕ್ಷೇತ್ರದಲ್ಲಿ ಸಾವಿರಾರು ಹೆಕ್ಟೇರ್ ಭೂಮಿಯಲ್ಲಿನ ಬೆಳೆ ಹಾಳಾಗಿದೆ. ರೈತ ಕಂಗಾಲಾಗಿದ್ದಾನೆ. ಆತನಿಗೆ ಸಾಂತ್ವನ ಹೇಳುವ ಬದಲು ಶಾಸಕರು ಕುಟುಂಬದ ಜೊತೆ ಮೋಜಿಗೆ ತೆರಳಿದ್ದು ವಿಪರ್ಯಾಸವೇ ಸರಿ.
ಇಂದು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ಹಲವು ಪ್ರದೇಶಗಳಲ್ಲಿ ಆಗಿರುವ ತೊಂದರೆಯ ಬಗ್ಗೆ ಮಾಹಿತಿ ಪಡೆದು, ಜನರ ಸಮಸ್ಯೆಗೆ ಸ್ಪಂಧಿಸುವ ಕುರಿತು ಸರಕಾರವನ್ನ ತರಾಟೆಗೆ ತೆಗೆದುಕೊಂಡಿದ್ದನ್ನ ಸ್ಮರಿಸಬಹುದಾಗಿದೆ.
ರೈತರು ಕೂಡಾ ಪರಿಹಾರ ಕೊಡಿ ಎಂದು ಕಚೇರಿಗಳಿಗೆ ಮನವಿ ಕೊಡುತ್ತಿದ್ದಾರೆ. ಆದರೆ, ಜನಪ್ರತಿನಿಧಿಯೇ ಇಲ್ಲವಾಗಿದ್ದಾರೆ.