ನೆಲದ ಮೇಲೆ ಕುಳಿತು ವಿಶೇಷಚೇತನ ವ್ಯಕ್ತಿಯ ಸಮಸ್ಯೆ ಆಲಿಸಿದ ಕಾರ್ಮಿಕ ಸಚಿವ ಲಾಡ್!

Share to all

ಧಾರವಾಡ: ಇಲ್ಲಿ ನಡೆದ ಜಿಲ್ಲಾ ಮಟ್ಟದ ಜನತಾದರ್ಶನ ಕಾರ್ಯಕ್ರಮದಲ್ಲಿ ವಿಕಲಚೇತನ ವ್ಯಕ್ತಿಯ ಸಮಸ್ಯೆ ತಿಳಿಯಲು ಅವರ ಜೊತೆ ನೆಲದ ಮೇಲೆ ಕುಳಿತು ಅವರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಒದಗಿಸಲು ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಿದರು. ಕಾರ್ಮಿಕ ಸಚಿವರ ಈ ನಡೆಗೆ ಹಲವರು ಪ್ರಶಂಸೆ ವ್ಯಕ್ತಪಡಿಸಿದರು.

ತಮ್ಮ ಸಂತೋಷ್‌ ಲಾಡ್‌ ಫೌಂಡೇಶನ್ ಮೂಲಕ ಸಾಧ್ಯವಾದಷ್ಟು ಸಹಾಯ ಮಾಡುವುದಾಗಿ ಲಾಡ್‌ ಅವರು ಭರವಸೆ ನೀಡಿದರು. ವಿವಿಧ ಅಹವಾಲುಗಳನ್ನು ಹೇಳಿಕೊಂಡು ಬರುವವರಿಗೆ ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುವ ಲಾಡ್‌ ಅವರು ಫೌಂಡೇಶನ್‌ ಮೂಲಕ ಹಲವಾರು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಲೇ ಇರುತ್ತಾರೆ.


Share to all

You May Also Like

More From Author