ಮಹಾನಗರ ಪಾಲಿಕೆಯಿಂದಲೂ ಸಡಗರ ಸಂಭ್ರದಿಂದ ರಾಜ್ಯೋತ್ಸವ ಆಚರಣೆ – ಶಾಸಕ ಪ್ರಸಾದ್ ಅಬ್ಬಯ್ಯ ಗೆ ಸಾಥ್ ನೀಡಿದ ಬಿಜೆಪಿ ಶಾಸಕರು,ಆಯುಕ್ತರು
ಹುಬ್ಬಳ್ಳಿ –
68ನೇ ಕನ್ನಡ ರಾಜ್ಯೋತ್ಸವದ ಸಡಗರ ಸಂಭ್ರಮ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಳೆಗಟ್ಟಿದ್ದು ನಗರದ ತುಂಬೆಲ್ಲಾ ಅದ್ದೂರಿಯಾಗಿ ಕಂಡು ಬಂದಿತು.ಇನ್ನೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದಲೂ ಈ ಒಂದು ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಿದ್ದು ಕಂಡು ಬಂದಿತು.ನಗರದ ಸಿದ್ದಾರೂಢ ಮಠದಲ್ಲಿ ಹಮ್ಮಿಕೊಂಡಿದ್ದ ಈ ಒಂದು ಕಾರ್ಯಕ್ರಮಕ್ಕೆ ಶಾಸಕ ಪ್ರಸಾದ್ ಅಬ್ಬಯ್ಯ ಚಾಲನೆ ನೀಡಿದರು.
ಇದರೊಂದಿಗೆ ನಗರದಲ್ಲಿ 68 ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮ ಕಂಡು ಬಂದಿತು.ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಸಂಭ್ರಮದ ಆಚರಣೆ ನಗರದಲ್ಲಿ ಕಂಡು ಬಂದಿತು.ನಗರದ ಸಿದ್ಧಾರೂಢ ಮಠದಿಂದ ರಾಜ್ಯೋತ್ಸವದ ಭವ್ಯ ಮೆರವಣಿಗೆ ನಡೆಯಿತು. ರಸ್ತೆಯುದ್ದಕ್ಕೂ ಕನ್ನಡದ ಬಾವುಟಗಳು ಕನ್ನಡದ ಹಾಡುಗಳು ರಾರಾಜಿದ್ದು ಕಂಡು ಬಂದಿತು ರಾಜ್ಯೋತ್ಸವದ ಭವ್ಯ ಮೆರವಣಿಗೆಗೆ ಚಾಲನೆ ನೀಡಿದ ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ್ ಹಾಗೂ ಪ್ರಸಾದ್ ಅಬ್ಬಯ್ಯ ಪಾಲ್ಗೊಂಡು ಮತ್ತಷ್ಟು ಮೆರಗು ನೀಡಿದರು.ಸಿದ್ಧಾರೂಢ ಮಠದಿಂದ ನೆಹರೂ ಮೈದಾನದ ವರೆಗೂ ಈ ಒಂದು ಭವ್ಯ ಮೆರವಣಿಗೆ ಸಾಗಿತು.ಭವ್ಯ ಮೆರವಣಿಗೆಯಲ್ಲಿ ಪ್ರಮುಖವಾಗಿ ಸ್ಥಬ್ಧ ಚಿತ್ರಗಳು ಸೇರಿದಂತೆ ಹಲವು ಗಮನ ಸೆಳೆದವು.ರಾಜ್ಯೋತ್ಸವ ಹಿನ್ನೆಲೆ ವಿವಿಧ ಕಲಾ ತಂಡಗಳಿಂದ ಭವ್ಯ ಮೆರವಣಿಗೆಗೆ ರಂಗು ತುಂಬಿತು.ಮೆರವಣಿಗೆ ಯುದ್ದಕ್ಕೂ ವಿವಿಧ ಕಲೆಗಳ ಸಂಗೀತ ನಿನಾದ ನೃತ್ಯಗಳು ಗಮನ ಸೆಳೆದವು.ಶಾಸಕರೊಂದಿಗೆ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ಕನ್ನಡ ಪರ ಸಂಘಟನೆಗಳ ಮುಖಂಡರು ಪಾಲಿಕೆಯ ಅಧಿಕಾರಿಗಳು ಸೇರಿದಂತೆ ಹಲವರು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ರಂಗು ತುಂಬಿದರು.
ಉದಯ ವಾರ್ತೆ ಹುಬ್ಬಳ್ಳಿ