ಡೆಲ್ಲಿಯ ಈ ಸ್ಟಾರ್ ಆಟಗಾರನ ಮೇಲೆ RCB ಕಣ್ಣು: ಬೆಂಗಳೂರು ತಂಡಕ್ಕೆ ಎಂಟ್ರಿ ಕೊಡ್ತಾರಾ ರಿಷಭ್!

Share to all

IPL ಮೆಗಾ ಹರಾಜಿಗೆ ಕೆಲವೇ ದಿನಗಳು ಬಾಕಿ ಇದ್ದು, ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ರಿಷಭ್ ಪಂತ್ ಅವರು, ಡೆಲ್ಲಿ ತೊರೆಯುವುದು ಕನ್ಫರ್ಮ್ ಎನ್ನಲಾಗಿದೆ ಹೀಗಾಗಿ ಅವರು ಹರಾಜಿನಲ್ಲಿ ಸಿಕ್ಕರೆ ಬಾಚಿಕೊಳ್ಳೋಣ ಎಂದು ಬಹಳಷ್ಟು ಫ್ರಾಂಚೈಸಿಗಳು ತುದಿಗಾಲಲ್ಲಿ ನಿಂತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಚೂಣಿಯಲ್ಲಿದೆ ಎಂದು ತಿಳಿದು ಬಂದಿದೆ.

ತಂಡದಲ್ಲಿ ಬಹಳಷ್ಟು ಬದಲಾವಣೆಗೆ ಮುಂದಾಗಿರುವ ದಿಲ್ಲಿ ಕ್ಯಾಪಿಟಲ್ಸ್ ಮ್ಯಾನೇಜ್ ಮೆಂಟ್ ಇತ್ತೀಚೆಗಷ್ಟೇ ತಂಡದ ಪ್ರಧಾನ ಕೋಚ್ ರಿಕಿ ಪಾಂಟಿಂಗ್ ಮತ್ತು ನಿರ್ದೇಶಕರಾಗಿದ್ದ ಸೌರವ್ ಗಂಗೂಲಿ ಇಬ್ಬರನ್ನೂ ಆ ಸ್ಥಾನಗಳಿಂದ ಕಿತ್ತು ಹಾಕಿತ್ತು. ಅವರ ಜಾಗಕ್ಕೆ ಕ್ರಮವಾಗಿ ಹೇಮಾಂಗ್ ಬದಾನ್ ಮತ್ತು ವೇಣುಗೋಪಾಲ ರಾವ್ ಅವರನ್ನು ನೇಮಿಸಿತ್ತು. ಹೀಗಾಗಿ ತಂಡದಲ್ಲೂ ಹಲವು ಬದಲಾವಣೆಗಳಾಗಬಹುದು ಎಂಬ ನಿರೀಕ್ಷೆ ಇತ್ತು. ಅದು ನಿಜವಾಗುವ ಲಕ್ಷಣ ಕಾಣಿಸುತ್ತಿದೆ.

ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆಯಲು ಮುಂದಾಗಿರುವುದೇಕೆ ಎಂಬುದೇ ಪ್ರಶ್ನೆ. ಈ ಪ್ರಶ್ನೆಗೆ ಸದ್ಯ ಸಿಗುತ್ತಿರುವ ಉತ್ತರ ಕೆಲ ಫ್ರಾಂಚೈಸಿಗಳಿಂದ ಪಂತ್​ ಬಂದಿರುವ ಬಿಗ್ ಆಫರ್​ಗಳು. ಹೀಗೆ ಎಡಗೈ ದಾಂಡಿಗನ ಮೇಲೆ ಕಣ್ಣಿಟ್ಟಿರುವ ಫ್ರಾಂಚೈಸಿಗಳ ಪೈಕಿ ಅಗ್ರಸ್ಥಾನದಲ್ಲಿರುವುದ ಚೆನ್ನೈ ಸೂಪರ್ ಕಿಂಗ್ಸ್ ಎಂಬುದು ವಿಶೇಷ.

ಐಪಿಎಲ್ ಮೆಗಾ ಹರಾಜಿನ ಸುದ್ದಿಯ ಬೆನ್ನಲ್ಲೇ ರಿಷಭ್ ಪಂತ್ ಜೊತೆ ಚೆನ್ನೈ ಸೂಪರ್ ಕಿಂಗ್ಸ್​ ಮಾತುಕತೆ ನಡೆಸಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಮಹೇಂದ್ರ ಸಿಂಗ್ ಧೋನಿಯ ಉತ್ತರಾಧಿಕಾರಿಯಾಗಿ ಅವರನ್ನು ನೇಮಿಸಿಕೊಳ್ಳಲು ಸಿಎಸ್​ಕೆ ಆಸಕ್ತಿವಹಿಸಿದ್ದು, ಹೀಗಾಗಿ ಪಂತ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು.

ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಬರುತ್ತಿರುವ ಸುದ್ದಿಯ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟಾರ್ಗೆಟ್ ಲಿಸ್ಟ್​ನಲ್ಲೂ ರಿಷಭ್ ಪಂತ್ ಹೆಸರಿಸಿದೆ ಎಂದು ಸುದ್ದಿಯಾಗಿದೆ. ಅಂದರೆ ಇಲ್ಲಿ ಸಿಎಸ್​ಕೆ ಜೊತೆ ಆರ್​ಸಿಬಿ ಕೂಡ ರಿಷಭ್ ಪಂತ್ ಮೇಲೆ ಕಣ್ಣಿಟ್ಟಿರುವುದು ಖಚಿತವಾಗಿದೆ.

ಇದರ ನಡುವೆ ಪಂಜಾಬ್ ಕಿಂಗ್ಸ್ ಕೂಡ ಹೊಸ ನಾಯಕನ ಹುಡುಕಾಟಕ್ಕೆ ಇಳಿದಿದೆ. ಇಲ್ಲಿ ಪಂಜಾಬ್ ತಂಡದ ನೂತನ ಕೋಚ್ ಆಗಿ ರಿಕಿ ಪಾಂಟಿಂಗ್ ನೇಮಕವಾಗಿದ್ದಾರೆ. ಈ ಹಿಂದೆ ಪಾಂಟಿಂಗ್ ಕೋಚಿಂಗ್​ನಲ್ಲೇ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು ಎಂಬುದು ಉಲ್ಲೇಖಾರ್ಹ. ಅಂದರೆ ಪಂತ್ ಮೆಗಾ ಹರಾಜಿಗೆ ಬರುವುದನ್ನು ಪಂಜಾಬ್ ಕಿಂಗ್ಸ್ ಕೂಡ ಕಾಯುತ್ತಿರುವುದು ಸುಳ್ಳಲ್ಲ.


Share to all

You May Also Like

More From Author