ಮೊಬೈಲ್ ಟವರನ್ನೇ ಎಗರಿಸಿರೋ ಖತರ್ನಾಕ್ ಕಳ್ಳರು! 0 ಟನ್ ತೂಕದ ಟವರ್ ಕದ್ದಿದಾದ್ರೂ ಹೇಗೆ ಗೊತ್ತಾ?

Share to all

ಶಿವಮೊಗ್ಗ:- ನಗರದ ತುಂಗಾ ನಗರ ಠಾಣೆ ವ್ಯಾಪ್ತಿಯಲ್ಲಿ ಕಳ್ಳನೋರ್ವ ಟವರ್ ಕದ್ದು ಎಸ್ಕೇಪ್ ಆಗಿದ್ದಾನೆ. ಟವರ್ ಕಳ್ಳತನ ಕುರಿತು ಖಾಸಗಿ ಕಂಪನಿಯು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದೆ. ಈಗ ನ್ಯಾಯಾಲಯದ ಸೂಚನೆ ಮೇರೆಗೆ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟವರ್‌ ಮತ್ತು ಬಿಡಿ ಭಾಗಗಳ ಅಂದಾಜು ಮೌಲ್ಯ 46.30 ಲಕ್ಷ ರೂ. ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಕಳ್ಳತನ ಕುರಿತು ಖಾಲಿ ಜಾಗದ ಮಾಲೀಕ ಅಫ್ಜಲ್ ಬೇಗ್ ವ್ಯತಿರಿಕ್ತವಾದ ಹೇಳಿಕೆ ನೀಡಿದ್ದಾರೆ. ಟವರ್ ಕಳ್ಳತನವಾಗಿಲ್ಲ. ಖಾಸಗಿ ಕಂಪನಿಯವರೇ ಬಂದು ಅದನ್ನು ತೆಗೆದುಕೊಂಡು ಹೋಗಿದ್ದಾರೆಂದು ಸ್ಪಷ್ಟನೆ ನೀಡಿದ್ದಾರೆ. ಟವರ್​ಗೆ 10 ವರ್ಷದ ವರೆಗೆ ಪ್ರತಿ ತಿಂಗಳು 15 ಸಾವಿರ ರೂಪಾಯಿ ಬಾಡಿಗೆ ಬಗ್ಗೆ ಜಾಗದ ಮಾಲೀಕರ ನಡುವೆ ಕರಾರು ಆಗಿತ್ತು. ನಾಲ್ಕೈದು ವರ್ಷ ಬಾಡಿಗೆ ಪಾವತಿಸಲಾಗಿತ್ತು. ನಂತರ ಖಾಸಗಿ ಕಂಪನಿಯವರು ಖಾಲಿ ಜಾಗದ ಮಾಲೀಕರಿಗೆ ಬಾಡಿಗೆ ನೀಡಿಲ್ಲ. ಇದರ ಬಳಿಕ ಟವರ್ ಬಗ್ಗೆ ಖಾಸಗಿ ಕಂಪನಿ ಮತ್ತು ಜಾಗದ ಮಾಲೀಕರು ನಿರ್ಲಕ್ಷ್ಯ ಮಾಡಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್ ಟವರ್ ಕಳೆದ ನಾಲ್ಕು ವರ್ಷಗಳ ಹಿಂದೆ ದುರಸ್ತಿಗೆ ಬಂದಿತ್ತು. ಅದರ ರಿಪೇರಿ ಮಾಡುವ ಗೋಜಿಗೆ ಖಾಸಗಿ ಕಂಪನಿಯವರು ಹೋಗಿರಲಿಲ್ಲ.

ಮೊಬೈಲ್ ಟವರ್ ನಿಷ್ಕ್ರಿಯವಾಗಿರುವುದನ್ನು ಕಳ್ಳರು ಗಮನಿಸಿದ್ದಾರೆ. ಹಂತ ಹಂತವಾಗಿ ಟವರ್ ಬಿಡಿಭಾಗಗಳನ್ನು ಕಳ್ಳರು ಎಗರಿಸಿದ್ದಾರೆ. ಕಳೆದ ಒಂದೆರಡು ವರ್ಷಗಳ ಹಿಂದೆ ಮೊಬೈಲ್ ಟವರ್ ಖಾಲಿ ಜಾಗದಲ್ಲಿ ಇರಲಿಲ್ಲ. ಟವರ್ ಸಮೇತ ಕಳ್ಳರು ಅದನ್ನು ಎಗರಿಸಿದ್ದಾರೆ ಎನ್ನುವುದು ಖಾಸಗಿ ಕಂಪನಿಯ ಮಾಲೀಕರ ಆರೋಪವಾಗಿದೆ. ಈ ಕಳ್ಳತನ ಕುರಿತು ಸ್ಥಳೀಯರು ಅಚ್ಚರಿಸಿ ವ್ಯಕ್ತಪಡಿಸಿದ್ದಾರೆ.

 

 

 


Share to all

You May Also Like

More From Author