ಮತ್ತೆ ಕನ್ನಡಿಗರ ಮನಗೆದ್ದ ABD: RCB ಗೆ ಕನ್ನಡದಲ್ಲೇ ಧನ್ಯವಾದ ತಿಳಿಸಿದ ವಿದೇಶಿ ಆಟಗಾರ!

Share to all

ಸೌತ್ ಆಫ್ರಿಕಾ ತಂಡದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಅವರಿಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ ನೀಡಿದೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಗೌರವಗಳು ಬರುತ್ತವೆ ಹೋಗುತ್ತವೆ, ಆದರೆ ಈ ಫ್ರೇಮ್ ಶಾಶ್ವತವಾಗಿ ಉಳಿಯುತ್ತದೆ’ ಎಂದು ಬರೆದು ಎಬಿಡಿ ಅವರ ಹಾಲ್ ಅಫ್ ಫೇಮ್​ ಗೌರವದ ಫೋಟೋ ಹಂಚಿಕೊಂಡಿದ್ದರು

ಈ ಫೋಟೋಗೆ ಖುದ್ದು ಎಬಿಡಿ ಪ್ರತಿಕ್ರಿಯಿಸಿದ್ದಾರೆ. ಅದು ಕೂಡ ಕನ್ನಡದಲ್ಲಿ ಎಂಬುದು ವಿಶೇಷ. ಆರ್​ಸಿಬಿ ಹಂಚಿಕೊಂಡಿದ್ದ ಫೋಟೋಗೆ ಎಬಿ ಡಿವಿಲಿಯರ್ಸ್ “ಧನ್ಯವಾದಗಳು” ಎಂದು ಕನ್ನಡದಲ್ಲೇ ಪ್ರತಿಕ್ರಿಯೆ ನೀಡಿ ಕನ್ನಡಿಗರ ಮನಗೆದ್ದಿದ್ದಾರೆ.

ಇದೀಗ ಆರ್​ಸಿಬಿ ತಂಡದ ಮಾಜಿ ಆಟಗಾರನ ಕನ್ನಡ ಪ್ರೀತಿಗೆ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಮತ್ತೆ ಆರ್​ಸಿಬಿ ತಂಡದಲ್ಲಿ ಕಾಣಿಸಿಕೊಳ್ಳುವಂತೆ ಅನೇಕ ಅಭಿಮಾನಿಗಳು ಎಬಿಡಿ ಅವರಲ್ಲಿ ಮನವಿ ಮಾಡಿದ್ದಾರೆ.


Share to all

You May Also Like

More From Author