ನವದೆಹಲಿ:- ಹರಿಯಾಣದ ರೊಹ್ಟಕ್‌ನಲ್ಲಿ ಮದುವೆಯಾಗುವಂತೆ ಒತ್ತಾಯಿಸಿದ ಗರ್ಭಿಣಿ ಪ್ರೇಯಸಿಯನ್ನು ಹತ್ಯೆ ಮಾಡಿದ ಘಟನೆ ಜರುಗಿದೆ. ಸೋಶಿಯಲ್ ಮೀಡಿಯಾದಲ್ಲಿ ಮೃತ ಯುವತಿ ಹಾಗೂ ಗೆಳೆಯ ಸಂಜು ಆಕಾ ಸಲೀಮ್ ಪರಸ್ಪರ ಸಂಬಂಧ ಹೊಂದಿದ್ದರು. ತನ್ನ ಗೆಳೆಯನೊಂದಿಗಿನ ಚಿತ್ರಗಳು ಮತ್ತು ವೀಡಿಯೊಗಳನ್ನು ನಿರಂತರವಾಗಿ ಪೋಸ್ಟ್ ಮಾಡುತ್ತಿದ್ದಳು.
ಪರಸ್ಪರ ಒಪ್ಪಿಗೆಯೊಂದಿಗೆ ಸಂಬಂಧದಲ್ಲಿದ್ದ ಯುವತಿ ಏಳು ತಿಂಗಳ ಗರ್ಭಿಣಿಯಾಗಿದ್ದಳು. ತನ್ನ ಗೆಳೆಯನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು. ಆದರೆ ಇದಕ್ಕೆ ಸಿದ್ಧನಿಲ್ಲದ ಸಂಜು ಆಕಾ ಸಲೀಮ್ ಅವಳನ್ನು ಗರ್ಭಪಾತ ಮಾಡಬೇಕೆಂದು ಬಯಸಿದ್ದು, ಈ ವಿಚಾರವಾಗಿ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಯುವತಿ ದೆಹಲಿಯ ತನ್ನ ಮನೆಯಿಂದ ಕೆಲ ವಸ್ತುಗಳನ್ನು ತೆಗೆದುಕೊಂಡು ಆರೋಪಿಯನ್ನು ಭೇಟಿಯಾಗಲು ರೊಹ್ಟಕ್‌ಗೆ ತೆರಳಿದ್ದಳು. ಆದರೆ ಮರಳಿ ಬಂದಿರಲಿಲ್ಲ. ಈ ಹಿನ್ನೆಲೆ ಆಕೆಯ ಪೊಷಕರು ಅ.23 ರಂದು ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಬಳಿಕ ಯುವತಿಯ ಗೆಳೆಯನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.