ಚಹಾದ ಜೊತೆ ರಸ್ಕ್ ತಿನ್ನೋ ಅಭ್ಯಾಸ ಇದ್ಯಾ!? ಹಾಗಿದ್ರೆ ಈ ಸಮಸ್ಯೆ ಗ್ಯಾರಂಟಿ!

Share to all

ಅನೇಕರಿಗೆ ಟೀ ಅಥವಾ ಕಾಫಿ ಜೊತೆಗೆ ರಸ್ಕ್‌ ಸೇವಿಸೋದು ಇಷ್ಟ. ಇನ್ನೂ ಅನೇಕರು ಅದನ್ನು ಹಾಗೆಯೇ ತಿನ್ನುತ್ತಿರುತ್ತಾರೆ. ಹಾಗಿದ್ರೆ ರಸ್ಕ್‌ ಆರೋಗ್ಯಕರ ತಿಂಡಿಯೇ..? ಅದನ್ನು ಟೀ ಕಾಫಿ ಜೊತೆಗೆ ಸೇವಿಸಬಹುದಾ? ಅದು ಯಾವ್ಯಾವ ಅಂಶಗಳನ್ನು ಒಳಗೊಂಡಿರುತ್ತೆ? ತಿಂದರೆ ಏನಾಗುತ್ತೆ ಅನ್ನೋದ್ರ ಬಗ್ಗೆ ತಜ್ಞರು ಏನಂತಾರೆ ಅನ್ನೋದನ್ನು ನೋಡೋಣ.

ಕೆಲವರಿಗೆ ಚಹಾ ಮತ್ತು ರಸ್ಕ್ ಸೇವನೆ ಕೆಟ್ಟದ್ದು ಎಂದು ಗೊತ್ತಿದ್ದರೂ ಸಹ ಬಿಡಲು ಸಾಧ್ಯವಿಲ್ಲದೇ ಸೇವನೆ ಮಾಡುತ್ತಾರೆ. ತಮ್ಮ ದಿನವನ್ನು ತುಂಬಾ ಜನರು ಚಹಾ ಮತ್ತು ರಸ್ಕ್‌ ತಿನ್ನುವ ಮೂಲಕ ಆರಂಭಿಸುತ್ತಾರ. ಪ್ರತಿ ಬಾರಿ ಚಹಾದ ಜೊತೆಗೆ ಬಿಸ್ಕತ್ತು ಅಥವಾ ರಸ್ಕ್ ಸೇವನೆ ಮಾಡುತ್ತಾರೆ. ಇದು ಆರೋಗ್ಯಕರವಲ್ಲ ಅಂತಾರೆ ತಜ್ಞರು. ಬೆಳಗಿನ ಉಪಾಹಾರವು ಯಾವಾಗಲೂ ದಿನದ ಮೊದಲ ಊಟವಾಗಿರುತ್ತದೆ

ಇದರಲ್ಲಿ ಯಾವಾಗಲೂ ಆರೋಗ್ಯಕರ ಮತ್ತು ಪೋಷಕಾಂಶ ಸಮೃದ್ಧ ಪದಾರ್ಥಗಳನ್ನು ಸೇವನೆ ಮಾಡಬೇಕಾಗುತ್ತದೆ. ಇದು ನಿಮಗೆ ದಿನವಿಡೀ ಶಕ್ತಿ ನೀಡುತ್ತದೆ. ಚಹಾದ ಜೊತೆ ರಸ್ಕ್ ಸೇವಿಸುವುದು ಸ್ವಲ್ಪ ಹೊತ್ತು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಆದರೆ ಇದು ಆರೋಗ್ಯಕ್ಕೆ ಶತ್ರುವಿದ್ದಂತೆ.

ಚಹಾದೊಂದಿಗೆ ರಸ್ಕ್ ಸೇವನೆಯು ಅನೇಕ ಗಂಭೀರ ಕಾಯಿಲೆಗೆ ಕಾರಣವಾಗಬಹುದು ಎಂದು ಅನೇಕ ಅಧ್ಯಯನಗಳು ಹೇಳಿವೆ. ದಿನವೂ ರಸ್ಕ್ ಮತ್ತು ಚಹಾ ಸೇವಿಸುವುದು ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಚಹಾದ ಜೊತೆ ರಸ್ಕ್ ಸೇವಿಸುವುದು ಕಡಿಮೆ ಕ್ಯಾಲೊರಿ ಎಂದು ನೀವು ತಿಳಿಸದರೆ ಇದು ತಪ್ಪು. ವಿಶೇಷ ಸಂಶೋಧನೆಯೊಂದರ ಪ್ರಕಾರ, ಬ್ರೆಡ್ಗಿಂತ ಹೆಚ್ಚಿನ ಕ್ಯಾಲೊರಿಗಳು ರಸ್ಕ್ನಲ್ಲಿ ಕಂಡು ಬರುತ್ತವೆ. 100 ಗ್ರಾಂ ರಸ್ಕ್‌ನಲ್ಲಿ ಸುಮಾರು 407 ಕ್ಯಾಲೋರಿ ಇದೆ. ಬಿಳಿ ಬ್ರೆಡ್‌ನಲ್ಲಿ ಸುಮಾರು 232 ರಿಂದ 250 ಕಿಲೋ ಕ್ಯಾಲರಿ ಇದೆ.

ರಸ್ಕ್ ತಯಾರಿಕೆಯಲ್ಲಿ ಮೈದಾ ಬಳಸಲಾಗುತ್ತದೆ. ಸ್ವಲ್ಪ ರವೆ ಸೇರಿಸಲಾಗುತ್ತದೆ. ಹೀಗಾಗಿ ಇದು ಜೀರ್ಣಕ್ರಿಯೆಗೆ ತೊಂದರೆ ಉಂಟು ಮಾಡುತ್ತದೆ. ರಸ್ಕ್ ತಿನ್ನುವುದರಿಂದ ಇನ್ಸುಲಿನ್ ಸ್ಪೈಕ್‌ಗಳಿಂದ ರಕ್ತದ ಸಕ್ಕರೆ ಮಟ್ಟ ಹೆಚ್ಚುತ್ತದೆ.

ರಸ್ಕ್ ಅನ್ನು ಸಂಸ್ಕರಿಸಿದ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್ಗಳ ಪ್ರಮಾಣ ಹೆಚ್ಚು. ರಸ್ಕ್ ಅನ್ನು ಅತಿಯಾಗಿ ಸೇವಿಸಿದರೆ ತೂಕವು ವೇಗವಾಗಿ ಹೆಚ್ಚಾಗುತ್ತದೆ. ಮಧುಮೇಹ ಸಹ ಬರಬಹುದು. ಸಂಸ್ಕರಿಸಿದ ಸಕ್ಕರೆಯನ್ನು ರಸ್ಕ್‌ಗೆ ಮಾಧುರ್ಯ ತರಲು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಾರೆ.

ಇದು ಆರೋಗ್ಯಕ್ಕೆ ತುಂಬಾ ಹಾನಿಕರ. ರಸ್ಕ್ ಸೇವನೆಯು ರಕ್ತದ ಸಕ್ಕರೆಯ ಮಟ್ಟ ಹೆಚ್ಚಿಸಲು ಕಾರಣ ಅಂತಾರೆ ತಜ್ಞರು. ಹೀಗಾಗಿ ರಸ್ಕ್ ಸೇವನೆ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ

ಆಹಾರ ತಜ್ಞರ ಪ್ರಕಾರ, ರಸ್ಕ್ ತಯಾರಿಸಲು ಬಳಸುವ ತೈಲವು ಹೆಚ್ಚಾಗಿ ತುಪ್ಪ ಅಥವಾ ಮಾರ್ಗರೀನ್ ಆಗಿದೆ. ಇದು ದೇಹದ ಉಷ್ಣತೆಯಲ್ಲೂ ದೇಹದಲ್ಲಿ ಗಟ್ಟಿಯಾಗುತ್ತದೆ. ಹಾಗಾಗಿ ಇದು ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆ ಉಂಟು ಮಾಡುತ್ತದೆ. ದಿನವೂ ರಸ್ಕ್ ಸೇವನೆಯಿಂದ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಶುರುವಾಗುತ್ತದೆ. ಇದು ಹೃದಯಾಘಾತಕ್ಕೂ ಕಾರಣವಾಗಬಹುದು.

ನಿಯಮಿತವಾಗಿ ರಸ್ಕ್ ಅನ್ನು ಚಹಾದ ಜೊತೆ ಸೇವಿಸಿದರೆ ಹೊಟ್ಟೆಯ ಸಮಸ್ಯೆಗೆ ಕಾರಣವಾಗುತ್ತದೆ. ಹೊಟ್ಟೆಯಲ್ಲಿ ಗ್ಯಾಸ್, ಕಳಪೆ ಜೀರ್ಣಕ್ರಿಯೆ, ಆಮ್ಲೀಯತೆ, ಮಲಬದ್ಧತೆ ಸಮಸ್ಯೆ ಎದುರಿಸಬೇಕಾಗಬಹುದು.


Share to all

You May Also Like

More From Author