ಬ್ಯಾನ್, ಬ್ಯಾನ್: ಗೋಲ್ ಗುಪ್ಪಾ ಪ್ರಿಯರು ನೋಡಲೇಬೇಕಾದ ಸ್ಟೋರಿ!

Share to all

ಬೆಂಗಳೂರು:- ಗೋಲ್ ಗುಪ್ಪಾ ಅಂದ್ರೆ ಅತಿ ಹೆಚ್ಚು ಜನರಿಗೆ ಇನ್ನಿಲ್ಲದ ಇಷ್ಟವಾದ ತಿಂಡಿ. ಸಂಜೆ ಆಗುತ್ತಿದ್ದಂತೆ ಮರೆಯದೆ ಹೋಗಿ ತಿನ್ನುತ್ತಾರೆ. ಅಷ್ಟು ಇಷ್ಟ ಈ ಗೋಲ್ ಗುಪ್ಪಾ ಅಂದ್ರೆ. ಆದರೆ ಇದೀಗ ಈ ಗೋಲ್ ಗುಪ್ಪಾ ಪ್ರಿಯರಿಗೆ ಶಾಕಿಂಗ್ ಸುದ್ದಿ ಒಂದು ಹೊರ ಬಿದ್ದಿದೆ. ಏನು ಆ ಸುದ್ದಿ ಅಂತಿದ್ದೀರಾ!? ಈ ಸ್ಟೋರಿ ನೋಡಿ.

ಎಸ್, ಶೀಘ್ರವೇ ಬ್ಯಾನ್ ಆಗುತ್ತಂತೆ ಗೋಲ್ ಗುಪ್ಪಾ. ಇದು ನಿಜಾನಾ.

ಹೌದು ವೀಕ್ಷಕರೇ, ಸಾರ್ವಜನಿಕ ಸ್ಥಳಗಳಲ್ಲಿ, ಮಾಲ್​​ಗಳಲ್ಲಿ ಫುಡ್ ಟೆಸ್ಟಿಂಗ್ ಕಿಟ್ ಇರಿಸಿ ಕಳಪೆ ಗುಣಮಟ್ಟದ ಆಹಾರದ ವಿರುದ್ಧ ಆಹಾರ ಇಲಾಖೆ ಸಮರ ಸಾರಿದೆ. ಇದೀಗ ಜನಪ್ರಿಯ ತಿನಿಸು ಗೋಲ್ ಗಪ್ಪಾ ಮೇಲೆಯೂ ನಿರ್ಬಂಧದ ತೂಗುಗತ್ತಿ ಎದುರಾಗಿದೆ. ಇದರಿಂದ ಗೋಲ್ ಗಪ್ಪಾ ಪ್ರಿಯರಿಗೂ ಶಾಕ್ ಎದುರಾಗುವ ಸಾಧ್ಯತೆ ಇದೆ.

ಗೋಲ್ ಗಪ್ಪಾದ ಗುಣಮಟ್ಟದ ಮೇಲೆ ಅನೇಕ ದೂರುಗಳು ಕೇಳಿ ಬಂದ ಕಾರಣ ಗೋಲ್ ಗಪ್ಪಾ ಪೂರಿ ತಯಾರಿಕಾ ಘಟಕಗಳ ಮೇಲೆ ಆಹಾರ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಆಹಾರ ಇಲಾಖೆಯಿಂದ ಫುಡ್ ಟೆಸ್ಟಿಂಗ್ ಕಾರ್ಯಾಚರಣೆ ಮುಂದುವರಿದಿದ್ದು, ಗೋಲ್ ಗಪ್ಪಾವನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಬೆಂಗಳೂರಿನಲ್ಲಿ ರ‍್ಯಾಂಡಮ್ ಆಗಿ ಗೋಲ್ ಗಪ್ಪಾ ಮಾದರಿ ಸಂಗ್ರಹಿಸಿ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಬೆಂಗಳೂರು ಮಾತ್ರವಲ್ಲದೆ, ಕರ್ನಾಟಕದಾದ್ಯಂತ 200 ಕ್ಕೂ ಹೆಚ್ಚು ಕಡೆ ಗೋಲ್ ಗಪ್ಪಾ ಮಾದರಿ ಸಂಗ್ರಹಿಸಲಾಗಿದ್ದು, ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಗೋಲ್ ಗಪ್ಪಾಗೆ ಬಳಸುವ ಪೂರಿ ಹೇಗೆ ತಯಾರು ಮಾಡುತ್ತಾರೆ? ಅದಕ್ಕೆ ಏನೆಲ್ಲಾ ಪದಾರ್ಥ ಹಾಕಲಾಗುತ್ತದೆ? ಇದರಿಂದ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಬೀರಲಿದೆ ಎಂಬುದನ್ನು ತಿಳಿಯಲು ಆಹಾರ ಇಲಾಖೆ ಮುಂದಾಗಿದೆ.

ಕಳೆದ ಎರಡು ದಿನಗಳಿಂದ ಗೋಲ ಗಪ್ಪಾ ತಯಾರಿಕಾ ಘಟಕಗಳ ಮೇಲೆ ಆಹಾರ ಇಲಾಖೆ ದಾಳಿ ನಡೆಸಿದೆ. ಸಂಗ್ರಹಿಸಿದ ಮಾದರಿಗಳನ್ನು ಇದೀಘ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು, ಕೆಲವೇ ದಿನಗಳಲ್ಲಿ ಬರಲಿದೆ ವರದಿ ದೊರೆಯಲಿದೆ.

ಗೋಲ್ ಗಪ್ಪಾ ರುಚಿ ಹೆಚ್ಚಳಕ್ಕೆ ಯೂರಿಯಾ ಗೊಬ್ಬರ ಹಾಗೂ ಹಾರ್ಪಿಕ್ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಬೇರೆ ರಾಜ್ಯಗಳಲ್ಲಿ ಇತಂಹ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲೇ ಕರ್ನಾಟಕ ಆಹಾರ ಹಾಗೂ ಗುಣಮಟ್ಟ ಇಲಾಖೆ ಎಚ್ಚೆತ್ತುಕೊಂಡಿದ್ದು, ಕ್ರಮಕ್ಕೆ ಮುಂದಾಗಿದೆ.


Share to all

You May Also Like

More From Author