RCB ಅಭಿಮಾನಿಗಳಿಗೆ ಗುಡ್ ನ್ಯೂಸ್: ಟೀಮ್ ಇಂಡಿಯಾಗೆ ಪಾದಾರ್ಪಣೆ ಮಾಡಿದ ಕನ್ನಡಿಗ!

Share to all

ಕರ್ನಾಟಕ ಫ್ಯಾನ್ಸ್​ಗೆ ಸಿಹಿ ಸುದ್ದಿ ಸಿಕ್ಕಿದ್ದು, ಟೀಮ್ ಇಂಡಿಯಾ ಜರ್ಸಿ ತೊಡಲು ಮತ್ತೊಬ್ಬ ಕನ್ನಡಿಗ ಸಜ್ಜಾಗಿದ್ದಾರೆ. ಕನ್ನಡಿಗ ವೈಶಾಕ್ ವಿಜಯಕುಮಾರ್ ಬ್ಲೂ ಜೆರ್ಸಿ ತೊಡಲು ಸಜ್ಜಾಗಿ ನಿಂತಿದ್ದಾರೆ. ಸೌತ್​ ಆಫ್ರಿಕಾ ಎದುರಿನ ಟಿ20 ಸರಣಿಗೆ ಸೆಲೆಕ್ಟ್​ ಆಗಿರೋ ಕರ್ನಾಟಕದ ಪೇಸ್​ ಸೆನ್ಸೇಷನ್​ ವೈಶಾಕ್​​, ಟೀಮ್​ ಇಂಡಿಯಾ ಪರ ಮಿಂಚಲು ಸಜ್ಜಾಗಿದ್ದಾರೆ.

ವೈಶಾಕ್​​ ಬೇಸಿಕಲಿ ಬೌಲಿಂಗ್ ಆಲ್​ರೌಂಡರ್. ಈ ಯುವ ಆಟಗಾರ ಮೀಡಿಯಮ್​ ಸೀಮರ್​ ಬೌಲಿಂಗ್​​ ಜೊತೆ ಬ್ಯಾಟಿಂಗ್​​ನಲ್ಲೂ ಕಮಾಲ್​ ಮಾಡಬಲ್ಲ ಕಿಲಾಡಿ. 2021ರಲ್ಲಿ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವುದರೊಂದಿಗೆ ವೈಶಾಖ್ ಕ್ರಿಕೆಟ್​ ಜರ್ನಿ ಶುರುವಾಯ್ತು.

2021ರ ಸೈಯದ್ ಮುಷ್ತಾಕ್​ ಅಲಿ ಟೂರ್ನಿಯಲ್ಲಿ 7 ವಿಕೆಟ್ ಮಾತ್ರವೇ ಬೇಟೆಯಾಡಿದ್ರೂ ಕೂಡ ವೈಶಾಕ್ ಬೌಲಿಂಗ್ ಎಲ್ಲರ ಗಮನ ಸೆಳೆದಿತ್ತು. ಇದೇ ಕಾರಣಕ್ಕೆ 2021ರ ವಿಜಯ್ ಹಜಾರೆ ಟೂರ್ನಿ ತಂಡಕ್ಕೂ ಎಂಟ್ರಿ ನೀಡಿದ್ರು. ಬಳಿಕ 2022ರಲ್ಲಿ ರಣಜಿ ಟೂರ್ನಿಗೂ ಕಾಲಿಟ್ಟರು. ಸಿಕ್ಕ ಅವಕಾಶ ಬಾಚಿಕೊಂಡ ವೈಶಾಕ್​, ಬ್ಯಾಕ್ ಟು ಬ್ಯಾಕ್ ಎರಡು ಸೀಸನ್​​​​​​ಗಳಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ರು.

ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ವೈಶಾಕ್​​, ರಜತ್​ ಪಾಟೀದಾರ್ ರಿಪ್ಲೇಸ್​ಮೆಂಟ್ ಪ್ಲೇಯರ್​ ಆಗಿ ಆರ್​ಸಿಬಿ ಸೇರಿದ್ದರು. 2023ರ ಸೀಸನ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಪದಾರ್ಪಣೆ ಮಾಡಿದ ವೈಶಾಕ್, ಅದ್ಭುತ ಪ್ರದರ್ಶನ ನೀಡಿದರು. ಆರ್​ಸಿಬಿಯಲ್ಲಿ ವೈಶಾಕ್​​​ಗೆ ಹೆಚ್ಚು ಅವಕಾಶಗಳು ಸಿಗದಿದ್ದರೂ, ಅಲ್ಲಿದ್ದಾಗಲೇ ವೈಶಾಕ್​ ಭವಿಷ್ಯ ರೂಪುಗೊಂಡಿದ್ದು ಸುಳ್ಳಲ್ಲ. ಒಟ್ನಲ್ಲಿ, ದೇಶಿ ಕ್ರಿಕೆಟ್​ನಲ್ಲಿ ಸ್ಥಿರ ಪ್ರದರ್ಶನ ನೀಡಿ ಮಿಂಚಿರುವ ವೈಶಾಕ್​, ಇದೇ ಮೊದಲ ಬಾರಿಗೆ ಬ್ಲ್ಯೂ ಜೆರ್ಸಿ ತೊಡಲು ಸಿದ್ಧರಾಗಿದ್ದಾರೆ.


Share to all

You May Also Like

More From Author