ಕಲಘಟಗಿ
ಮೇಯಲು ಹೋಗಿದ್ದ ಎತ್ತಿನ ಮೇಲೆ ಚಿರತೆಗಳ ಹಿಂಡೊಂದು ದಾಳಿ ಮಾಡಿದ ಘಟನೆ ಕಲಘಟಗಿ ತಾಲೂಕಿನ ಹಟಕಿನಾಳ ಗ್ರಾಮದಲ್ಲಿ ಜರುಗಿದೆ.
ಮನೆಯಿಂದ ಎತ್ತು ಮೇಯಲು ಹೋಗಿ ವಾಪಸ್ಸು ಬಾರದೇ ಇದ್ದಾಗ.ಎತ್ತಿನ ಮಾಲಿಮ ತನ್ನ ಎತ್ತನ್ನು ಹುಡುಕಿಕೊಂಡು ಹೋದಾಗ ಎತ್ತಿನ ಮೇಲೆ ಚಿರತೆಗಳು ದಾಳಿ ಮಾಡಿ ತಿನ್ನುವ ದ್ರಶ್ಯ ಕಂಡ ಗಾಬರಿಯಿಂದ ಓಡೋಡಿ ಮನೆಗೆ ಬಂದಿದ್ದಾನೆ.
ಚಿರತೆಗಳ ಹಿಂಡೊಂದು ಎತ್ತಿನ ಮೇಲೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಎತ್ತುಗಳ ಮಾಲಿಕ ಗ್ರಾಮಸ್ಥರಿಗೆ ಮತ್ತು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿ ಅರಣ್ಯ ಅಧಿಕಾರಿಗಳು ಬಂದ ತಕ್ಷಣ ಸ್ಥಳಕ್ಕೆ ಹೋಗುವುದರೊಳಗಾಗಿ ಎತ್ತಿನ ಕಥೆ ಮುಗಿದಿತ್ತು.
ಕಲಘಟಗಿಯ ಕಾಡಂಚಿನ ಜನ ಈ ಚಿರತೆಗಳ ಹಿಂಡು ನೋಡಿ ಭಯಭೀತರಾಗಿದ್ದಾರೆ.
ಉದಯ ವಾರ್ತೆ ಕಲಘಟಗಿ