ಅನ್ನದಾತನ ಸಾವಿಗೆ ಬ್ಯಾಂಕ ಅಧಿಕಾರಿಗಳು ಕಾರಣರಾದರಾ.
ಧಾರವಾಡ:-ಬ್ಯಾಂಕ ಅಧಿಕಾರಿಗಳು ಸಾಲ ಮರುಪಾವತಿಗೆ ಒತ್ತಾಯಿಸಿದರು ಎಂದು ರೈತನೋರ್ವ ಆತ್ಮಹತ್ಯೆಗೆ ಯತ್ನಿಸಿ ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮದಲ್ಲಿ ಜರುಗಿದೆ.
ರೈತ ಮಹದೇವಪ್ಪ ಜಾವೂರ ಎಂಬುವರು ಕೆವಿಜಿ ಬ್ಯಾಂಕಿನಲ್ಲಿ ಬೆಳೆಸಾಲ ಮಾಡಿದ್ದ ಅಲ್ಲಿನ ಬ್ಯಾಂಕ ಸಿಬ್ಬಂದಿ ಸಾಲಮರು ಪಾವತಿ ಮಾಡುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ರೈತ ಆತ್ಮಹತ್ಯೆಗೆ ಬ್ಯಾಂಕ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿ ಇಂದು ಧಾರವಾಡದ ಕೆವಿಜಿ ಬ್ಯಾಂಕ ಪ್ರಧಾನ ಕಛೆರಿ ಎದುರಿಗೆ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ರೈತನ ಸಾವಿಗೆ ಬ್ಯಾಂಕ ಅಧಿಕಾರಿಯೇ ಕಾರಣ ಅವರ ಮೇಲೆ ಕಾನೂನು ಕ್ರಮಕೈಕೊಳ್ಳಬೇಕು ಮತ್ತು ಆತ್ಮಹತ್ಯೆಗೆ ಶರಣಾದ ಕುಟುಂಬಕ್ಕೆ 25 ಲಕ್ಷ ಪರಿಹಾರ ಕೊಡಬೇಕು ಮತ್ತು ಆ ರೈತನ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ,ರೈತ ಸೇನಾ ಕರ್ನಾಟಕ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಪಾಲ್ಗೊಂಡಿದ್ದರು.
ಉದಯ ವಾರ್ತೆ ಧಾರವಾಡ