ಬೆಂಗಳೂರು:- ಇದು ಇಡೀ ರಾಜಧಾನಿ ಬೆಂಗಳೂರು ಮಂದಿಯನ್ನೇ ನಡುಗಿಸಿದ ಸ್ಟೋರಿ. ತಾನೊಬ್ಬ ಹಿಂದೂ ಯುವಕ ಎಂದು ಹೇಳಿ ಹಿಂದೂ ಯುವತಿ ವರಿಸಿ ಮುಸ್ಲಿಂ ಯುವಕ ವರಸೆ ಬದಲಿಸಿದ ಸ್ಟೋರಿ. ನೀವು ಯಾಮಾರಬೇಡಿ ಈ ಸುದ್ದಿ ಮಿಸ್ ಮಾಡ್ದೆ ನೋಡಿ. ಎಸ್, ನಿಧಿಗಾಗಿ ತನ್ನ ಮಗುವನ್ನು ಬಲಿ ಕೊಡಲು ಪಾಪಿ ತಂದೆಯೋರ್ವ ಬಲಿ ಕೊಡಲು ಮುಂದಾದ ಘಟನೆ ಬೆಂಗಳೂರಿನ ಕೆ ಆರ್ ಪುರಂನಲ್ಲಿ ಜರುಗಿದೆ.
ನಿಧಿಗಾಗಿ ಮಂತ್ರವಾದಿ ವಿದ್ಯೆ ಅಭ್ಯಾಸ ಮಾಡಿ, ತನ್ನ ಮಗುವನ್ನೇ ಮಲಿಕೊಡಲು ಮುಂದಾಗಿದ್ದಾನೆ. ಸದ್ದಾಂ ಎಂಬಾತ ನಿಧಿಗಾಗಿ ಮಾಟ ಮಂತ್ರ ಮಾಡುತ್ತಿದ್ದನು. ನಿಧಿ ಆಸೆಗಾಗಿ ಕುಟ್ಟಿ ಸೈತಾನ್ ಪೂಜೆಯಲ್ಲಿ ತನ್ನ ಮಗುವನ್ನು ಬಲಿ ಕೊಡಲು ಮುಂದಾಗಿದ್ದು, ಬಲಿ ನೀಡುವಂತೆ ತನ್ನ ಪತ್ನಿಗೆ ಕಿರುಕುಳ ನೀಡಿದ್ದಾನೆ.
ಮಂತ್ರ ಪಠಿಸುತ್ತಾ ಸದ್ದಾಂ ತಡರಾತ್ರಿ ವಾಮಾಚಾರ ಅಭ್ಯಾಸ ಮಾಡುತ್ತಿದ್ದನು. ಮಗು ಬಲಿ ಕೊಡೋಕೆ ಸದ್ದಾಂ ತನ್ನ ಪತ್ನಿಗೆ ಕಿರುಕುಳ ಕೊಟ್ಟಿದ್ದಾನೆ ಎಂದು ತಿಳಿದುಬಂದಿದೆ. ಸೈಕೋಪಾಥ್ ಪತಿಯ ಕಿರುಕುಳಕ್ಕೆ ಬೇಸತ್ತು ಸಂತ್ರಸ್ತೆ ಪೊಲೀಸ್ ಕಮೀಷನರ್ ಬಿ. ದಯಾನಂದ್ ಅವರಿಗೆ ದೂರು ನೀಡಿದ್ದಾರೆ. ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ.
ಆರೋಪಿ ಸದ್ಧಾಂ ನಾಲ್ಕು ವರ್ಷಗಳ ಹಿಂದೆ ಹಿಂದೂ ಯುವತಿಯನ್ನು ಮದುವೆಯಾಗಿದ್ದನು. ಆಗ ತಾನು ಹಿಂದೂ ಯುವಕ ಎಂದು ನಂಬಿಸಿ ಮದುವೆಯಾಗಿದ್ದನು. ತನ್ನ ಹೆಸರನ್ನು ಆಧೀಶ್ವರ್ ಎಂದು ಹೇಳಿಕೊಂಡಿದ್ದನು. ಕೆಲವುದಿನಗಳ ನಂತರ ಅವರಿಗೆ ಗಂಡು ಮಗು ಜನಸಿತು. ಆ ನಂತರ ಕುಟ್ಟಿ ಸೈತಾನ್ ಪೂಜೆಗೆ ಒತ್ತಾಯ ಮಾಡಲು ಶುರು ಮಾಡಿದನು. ಕುಟ್ಟಿ ಸೈತಾನ್ ಪೂಜೆಯಲ್ಲಿ ಮಗು ಬಲಿ ಕೊಡಬೇಕು ಎಂದು ಹೇಳಿದ್ದನು.
ಮಗುವನ್ನ ಬಲಿ ಕೊಟ್ರೆ ಸಮೃದ್ದಿ ಹೆಚ್ಚಾಗತ್ತೆ, ನಿಧಿ ಸಿಗತ್ತೆ ಎಂದಿದ್ದನು. ತಡರಾತ್ರಿ ಮಂತ್ರ ಪಠಿಸುತ್ತಾ ವಾಮಾಚಾರ ವಿದ್ಯೆ ಅಭ್ಯಾಸ ಮಾಡ್ತಿದ್ದ. ಪತಿ ಸದ್ದಾಂ ವರ್ತನೆಯನ್ನು ಕಂಡು ಸಂತ್ರಸ್ತೆ ಭಯಭೀತಳಾಗಿದ್ದಳು. ತುಮಕೂರಿಗೆ ತೆರಳಿ ಮಗು ಬಲಿ ಕೊಡೋಣ ಅಂತ ದಿನನಿತ್ಯ ಪತ್ನಿಗೆ ಟಾರ್ಚರ್ ಮಾಡುತ್ತಿದ್ದನು ಎಂದು ಸದ್ದಾಂ ವಿರುದ್ಧ ಕೆ.ಆರ್.ಪುರಂ ಠಾಣೆಗೆ ಮಹಿಳೆ ದೂರು ನೀಡಿದ್ದಾಳೆ.