ಮೆಗಾ ಹರಾಜಿನಲ್ಲಿ ಪಂತ್!? ರಿಷಬ್ ಗೆ ಬಿಗ್ ಆಫರ್ ಕೊಟ್ಟ RCB!

Share to all

IPL ಮೆಗಾ ಹರಾಜಿಗೆ ದಿನಗಣನೆ ಆರಂಭವಾಗಿದ್ದು, ಆಟಗಾರರ ಖರೀದಿಯಲ್ಲಿ ಪ್ರಾಂಚೈಸಿಗಳು ಮುಂದಾಗಿದೆ. ಐಪಿಎಲ್ ಫ್ರಾಂಚೈಸಿಗಳು ಯಾರನ್ನು ಉಳಿಸಿಕೊಳ್ಳಬೇಕು ಎಂಬ ಬಗ್ಗೆ ಭಾರೀ ತಲೆಕೆಡಿಸಿಕೊಂಡಿವೆ. ಅದರಲ್ಲೂ ಹರಾಜಿನಲ್ಲಿ ಯಾರನ್ನು ಖರೀದಿ ಮಾಡಬೇಕು ಎಂದು ಎಲ್ಲಾ ತಂಡಗಳು ಕಾರ್ಯತಂತ್ರ ರೂಪಿಸುತ್ತಿದೆ. ಇದರ ಮಧ್ಯೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಬಿಗ್​ ಅಪ್ಡೇಟ್​ ಒಂದು ಹೊರಬಿದ್ದಿದೆ.

ಮುಂದಿನ ಸೀಸನ್​ಗಾಗಿ ​ಡೆಲ್ಲಿ ಕ್ಯಾಪಿಟಲ್ಸ್ ಹೊಸ ನಾಯಕನಿಗಾಗಿ ಹುಡುಕಾಟ ಶುರು ಮಾಡಿದೆ. ಇದರ ಮಧ್ಯೆ ಕ್ಯಾಪ್ಟನ್​ ರಿಷಬ್ ಪಂತ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್​​ನ 2ನೇ ಇನ್ನಿಂಗ್ಸ್‌ನಲ್ಲಿ 99 ರನ್‌ ಚಚ್ಚಿದ ಪಂತ್​​ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಈ ಹೊತ್ತಲ್ಲೇ ಪಂತ್​​​ ಅವರನ್ನು ನಾಯಕತ್ವದ ತೆಗೆದುಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್ ಮುಂದಾಗಿರುವುದು ಅಚ್ಚರಿ ಸಂಗತಿ. ಪಂತ್ ಬದಲಿಗೆ ಅಕ್ಸರ್ ಪಟೇಲ್ ನಾಯಕರಾಗಿ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಭಾರೀ ಕುತೂಹಲ ಮೂಡಿಸಿದೆ.

2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗಾಗಿ ಸ್ಟಾರ್​ ಕ್ರಿಕೆಟರ್​ ಕೆ.ಎಲ್​ ರಾಹುಲ್​​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸೇರಲಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಬೆನ್ನಲ್ಲೇ ಆರ್​​ಸಿಬಿ ಮತ್ತೋರ್ವ ಸ್ಟಾರ್​ ಕ್ರಿಕೆಟರ್​ಗೆ ಮಣೆ ಹಾಕಲಿದೆ ಎಂದು ತಿಳಿದು ಬಂದಿದೆ. ಆರ್‌ಸಿಬಿ ಟೀಮ್ ಮ್ಯಾನೇಜ್ಮೆಂಟ್‌ ಸ್ಪೋಟಕ ಬ್ಯಾಟರ್‌ ರಿಷಭ್‌ ಪಂತ್‌ ಅವರನ್ನು ಬಲೆಗೆ ಬೀಳಿಸಿಕೊಳ್ಳಲು ಪ್ಲ್ಯಾನ್ ಮಾಡಿದೆ. ಪಂತ್​​ ಆರ್​​ಸಿಬಿಗೆ ಬಂದರೆ ಮೂರು ಸ್ಲಾಟ್​ಗಳು ಫಿಲ್​ ಆಗಲಿವೆ ಎಂಬುದು ಮ್ಯಾನೇಜ್ಮೆಂಟ್​ ಪ್ಲಾನ್​​.

ಹರಾಜಿನಲ್ಲಿ ಆರ್​​ಸಿಬಿ ಅನುಭವಿ ಮಿಡಲ್​ ಆರ್ಡರ್​ ವಿಕೆಟ್​ ಕೀಪರ್​ ಬ್ಯಾಟರ್​ಗಾಗಿ ಹುಡುಕಾಟ ನಡೆಸಲಿದೆ. ಹೀಗಾಗಿ ಪಂತ್‌ ಡೆಲ್ಲಿ ಕ್ಯಾಪಿಟಲ್ಸ್‌ ಬಿಟ್ಟರೆ, ಆರ್​​ಸಿಬಿಗೆ ಬರಬಹುದು. ಇದರಿಂದ ಆರ್‌ಸಿಬಿ ತಂಡ ಮಾಡಿಕೊಂಡ ಪ್ಲ್ಯಾನ್‌ ವರ್ಕ್‌ ಆಗುತ್ತದೆ ಅನ್ನೋ ಚರ್ಚೆ ನಡೆಯುತ್ತಿದೆ.


Share to all

You May Also Like

More From Author