ಸತ್ಯ ಧಾರವಾಹಿ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿರುವ ಗೌತಮಿ ಅವರು ಬಿಗ್ ಬಾಸ್ ಮನೆಯಲ್ಲಿ ಪಾಸಿಟಿವಿಟಿಯಿಂದಾಗಿ ಗುರುತಿಸಿಕೊಂಡಿದ್ದಾರೆ. ಆದ್ರೆ ಎಲ್ಲಾ ಸಂದರ್ಭಗಳಲ್ಲೂ ಇದು ಸಾಧ್ಯವಿಲ್ಲ. ಧನರಾಜ್ ಅವರ ವರ್ತನೆಯೊಂದನ್ನು ಖಂಡಿಸಿದ್ದು, ಇದೇ ಅವರು ಎಲಿಮಿನೇಶನ್ಗೆ ನಾಮಿನೇಟ್ ಆಗುವಂತೆ ಮಾಡಿದೆ.
ಬಿಗ್ ಬಾಸ್ ಮನೆಯಲ್ಲಿ ಸಾಂಗ್ಸ್ ಅಲರಾಮ್ ಇದ್ದಂತೆ. ಬೆಳಗ್ಗೆ ಹಾಡು ಹಾಕಿದಾಗ ಹೆಚ್ಚಿನವರು ಸಖತ್ ಸ್ಟೆಪ್ ಹಾಕುತ್ತಾರೆ. ಆದ್ರೆ ಕಳೆದ ದಿನ ಗೌತಮಿ ಬೆಡ್ ಬಿಟ್ಟಿರಲಿಲ್ಲ. ಇನ್ನೇನು ಎದ್ದು ಬರಬೇಕು ಅನ್ನುವಷ್ಟರಲ್ಲಿ ಧನರಾಜ್ ಅವರು ಗೌತಮಿ ಅವರಿಗೆ ಪಿಲ್ಲೋ ಇಂದ ಹೊಡೆಯುತ್ತಾರೆ. ಇದು ಗೌತಮಿ ಅವರಿಗೆ ಕಿರಿಕಿರಿ ಉಂಟು ಮಾಡಿದೆ. ನನಗಿದು ಇಷ್ಟ ಆಗಲಿಲ್ಲ. ಮೊದಲ ಬಾರಿ ಅಂತಾ ಸುಮ್ಮನಿದ್ದೇನೆ. ದಯವಿಟ್ಟು ನನ್ನನ್ನು ಈ ರೀತಿ ಎಬ್ಬಿಸಬೇಡಿ.
ಸಾಂಗ್ ಪ್ಲೇ ಆದಾಗ ಏಳಬೇಕೆಂಬುದು ನನಗೂ ಗೊತ್ತು ಎಂದು ತಿಳಿಸಿದ್ದಾರೆ. ಇದು ಧನರಾಜ್ಗೆ ಅಚ್ಚರಿ ಉಂಟುಮಾಡಿದೆ. ನಾಮಿನೇಷನ್ನಲ್ಲಿ ಇದೇ ಕಾರಣ ಕೊಟ್ಟು ಧನರಾಜ್ ಅವರು ಗೌತಮಿ ಅವರನ್ನು ನಾಮಿನೇಟ್ ಮಾಡಿದ್ದಾರೆ. ಇದರಿಂದ ಅಸಮಾಧಾನಗೊಂಡ ಗೌತಮಿ ‘ನಾನು ಪಾಸಿಟಿವಿಟಿ’ ಅನ್ನೋದನ್ನು ಮರೆತುಬಿಡಿ ಎಂದು ತಿಳಿಸಿದ್ದಾರೆ