ಐಪಿಎಲ್ 2025 ರ ಮೆಗಾ ಹರಾಜಿನ ಮೊದಲು ಐಪಿಎಲ್ ರಿಟೇನ್ ಪಟ್ಟಿ ಪ್ರಸ್ತುತ ಸುದ್ದಿಯಲ್ಲಿದೆ. ಎಲ್ಲಾ 10 ಫ್ರಾಂಚೈಸಿಗಳು ಯಾವ ಆಟಗಾರರನ್ನು ಉಳಿಸಿಕೊಂಡಿವೆ ಎಂಬುದು ಇನ್ನೂ ಕೆಲವೇ ಗಂಟೆಗಳಲ್ಲಿ ಬಹಿರಂಗಗೊಳ್ಳಲಿದೆ.
ಐಪಿಎಲ್ ರಿಟೇನ್ಷನ್ ಮೇಲೆ ಎಲ್ಲರೂ ಹದ್ದಿನ ಕಣ್ಣು ಇಟ್ಟಿದ್ದಾರೆ. ಯಾವ ತಂಡ ಯಾರನ್ನು ಉಳಿಸಿಕೊಂಡಿದೆ. ಯಾರನ್ನು ಕೈ ಬಿಟ್ಟಿದೆ ಎಂಬ ಪರ್ಫೆಕ್ಟ್ ಪಿಕ್ಚರ್ ಇಂದು ಸಿಗಲಿದೆ. ಅಂದಹಾಗೆ ಬಿಸಿಸಿಐ ಗರಿಷ್ಠ ಆರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಿದೆ. ರಿಟೇನ್ಷನ್ ಪಾಲಿಸಿ ಕೆಲವು ತಂಡಗಳಿಗೆ ಕಬ್ಬಿಣದ ಕಡಲೆ ಆಗಿದೆ. ತಂಡದಲ್ಲಿ ಬಹುತೇಕ ಸ್ಟಾರ್ ಆಟಗಾರರು ಇದ್ದು ಕೇವಲ ಆರು ಜನರನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ.
ಇನ್ನು ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರ ಬಗ್ಗೆ ಈಗಾಗಲೇ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಿದೆ. ಅಂದರೆ ಆರು ಜನರನ್ನು ಉಳಿಸಿಕೊಳ್ಳುವ ತಂಡದಲ್ಲಿ ಗರಿಷ್ಠ ಇಬ್ಬರು ವಿದೇಶಿ ಆಟಗಾರನಿಗೆ ಉಳಿಸಿಕೊಳ್ಳುವ ಅವಕಾಶ ಇದ್ದು, ಇಬ್ಬರು ಅನ್ ಕ್ಯಾಪ್ಡ್ ಪ್ಲೇಯರ್‌ಗಳನ್ನು ತಂಡ ಉಳಿಸಿಕೊಳ್ಳಬಹುದು. ಅಲ್ಲದೆ ಮಾಲೀಕರು ರೈಟ್ ಟು ಮ್ಯಾಚ್ ಕಾರ್ಡ್ ಅವಕಾಶದ ಲಾಭವನ್ನು ಸಹ ಐಪಿಎಲ್ ಹರಾಜಿನಲ್ಲಿ ಪಡೆಯಬಹುದು. ಆದರೆ ಅವರು ತಂಡದಲ್ಲಿ ಎಷ್ಟು ಆಟಗಾರರನ್ನು ಉಳಿಸಿಕೊಳ್ಳುತ್ತಾರೆ ಎಂಬುದರ ಮೇಲೆ ಆರ್‌ಟಿಎಂ ನಿರ್ಧಾರವಾಗಲಿದೆ.
ಬಿಸಿಸಿಐ ಆಟಗಾರರಿಗೆ ಎಷ್ಟು ಹಣವನ್ನು ನೀಡಬೇಕು ಎಂಬುದನ್ನು ಸಹ ಸ್ಪಷ್ಟವಾಗಿದೆ ತಿಳಿಸಿದೆ. ಮೊದಲ ಆಯ್ಕೆಯ ಆಟಗಾರನಿಗೆ 18 ಕೋಟಿ ರೂ. ನೀಡಬಹುದ. ಅಲ್ಲದೆ ಎರಡನೇ ಆಯ್ಕೆಯ ಆಟಗಾರನಿಗೆ 14 ಹಾಗೂ ಮೂರನೇ ಆಯ್ಕೆಯ ಆಟಗಾರನಿಗೆ 11 ಕೋಟಿ ರೂ. ನೀಡಿ ತಂಡದಲ್ಲಿ ಉಳಿಸಿಕೊಳ್ಳಬಹುದಾಗಿದೆ. ಅಲ್ಲದೆ ಅನ್ ಕ್ಯಾಪ್ಡ್ ಆಟಗಾರರಿಗೆ 4 ಕೋಟಿ ನೀಡಿ ತಂಡದಲ್ಲಿ ಉಳಿಸಿಕೊಳ್ಳಬಹುದಾಗಿದೆ.
ಈ ಬಾರಿ ಬಿಸಿಸಿಐ ಪರ್ಸ್ ಸೈಜ್ ಇನ್ ಕ್ರೀಸ್ ಮಾಡಿದೆ. ಅಂದಹಾಗೆ ಈ ಬಾರಿ ಮಾಲೀಕರು 120 ಕೋಟಿ ರೂಪಾಯಿಯನ್ನು ತಮ್ಮ ಪರ್ಸ್‌ನಲ್ಲಿ ಹೊಂದಿರುತ್ತಾರೆ. ಅಲ್ಲದೆ ಈ ಹಣದ ಮೂಲಕವೇ ಐಪಿಎಲ್ ಮೆಗಾ ಹರಾಜಿನಲ್ಲಿ ಆಟಗಾರರಿಗೆ ಗಾಳ ಹಾಕಲಾಗುತ್ತದೆ. ಇನ್ನು ಒಂದು ತಂಡ ಗರಿಷ್ಠ 25 ಆಟಗಾರರನ್ನು ಹೊಂದಲು ಅವಕಾಶ ನೀಡಲಾಗಿದೆ.