ಚನ್ನಪಟ್ಟಣ :ನಾನು ಕುಮಾರಸ್ವಾಮಿ ಮಗನಾಗಿ ಹುಟ್ಟಿದ್ದೇ ತಪ್ಪಾ ಎಂದು ಹೇಳುವ ಮೂಲಕ ನಿಖಿಲ್ ಕುಮಾರಸ್ವಾಮಿ ಕಣ್ಣೀರು ಹಾಕಿದ ಘಟನೆ ಚನ್ನಪಟ್ಟಣದಲ್ಲಿ ಜರುಗಿದೆ.ಎರಡು ಭಾರಿ ನಾನು ಚುನಾವಣೆಯಲ್ಲಿ ಸೊತ್ತಿದ್ದೇನೆ, ನಾನು ಏನು ತಪ್ಪು ಮಾಡಿದ್ದೇನೆ ಗೊತ್ತಿಲ್ಲ. ಮಾಜಿ ಪ್ರಧಾನಿ ಮತ್ತು ಮಾಜಿ ಮುಖ್ಯ ಮಂತ್ರಿ ಮಗನಾಗಿ ಹುಟ್ಟಿರುವುದೇ ನನ್ನ ದುರದೃಷ್ಟನೋ ಗೊತ್ತಿಲ್ಲ ಎಂದು ಕಣ್ಣೀರು ಹಾಕಿದರು.
ಚನ್ನಪಟ್ಟಣದ ಕನ್ನಮಂಗಲ ಗ್ರಾಮದ ಪ್ರಚಾರ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಭಾವುಕರಾದರು. ಈ ಚುನಾವಣೆಯಲ್ಲಿ ನಾನು ಕಣ್ಣೀರು ಹಾಕಬಾರದು ಅಂನ್ಕೊಂಡಿದ್ದೇ. ಆದರೆ ಸಾಕಷ್ಟು ನೋವುಗಳಿವೆ ಎಂದು ಭಾಷಣದ ವೇಳೆ ಕಣ್ಣೀರು ಹಾಕಿದರು.
ನಾನು ಎರಡು ಚುನಾವಣೆಯಲ್ಲೂ ಪೆಟ್ಟು ತಿಂದಿದ್ದೇನೆ.ಜನ ನನ್ನ ಪರವಾಗಿ ಮತ ಹಾಕಿದ್ದಾರೆ.ಆದರೆ ರಾಜಕೀಯ ಷಡ್ಯಂತ್ರಕ್ಕೆ ನಾನು ಬಲಿಯಾಗಿದ್ದೇನೆ. ಬಹಳ ನೋವಿನಲ್ಲಿ ಇದ್ದೇನೆ.ಇವತ್ತು ಪಕ್ಷದ ಕಾರ್ಯಕರ್ತರಿಗೆ ಬೆಲೆ ಕೊಡಬೇಕೆಂದು ಈ ಚುನಾವಣೆಯಲ್ಲಿ ನಿಂತಿದ್ದೇನೆ. ದಯವಿಟ್ಟು ಈ ಭಾರಿ ಈ ಯುವಕನನ್ನ ಗೆಲ್ಲಿಸಿ ಎಂದು ಎಂದು ಮನವಿ ಮಾಡಿದರು.