ವಿದ್ಯಾಕಾಶಿಯಲ್ಲಿ ಮೊಳಗಿದ ಕನ್ನಡ ಡಿಂಡಿಮ..ಜಗ್ಗಲಗಿ ಬಾರಿಸುವ ಮೂಲಕ ಮೇಯರ್ ರಾಮಣ್ಣ ಬಡಿಗೇರ ಚಾಲನೆ...
ಧಾರವಾಡ:-ಕನ್ನಡ ರಾಜ್ಯೋತ್ಸವದ ಅಂಗವಾಗಿ ಧಾರವಾಡದಲ್ಲಿ ಭುವನೇಶ್ವರಿ ತಾಯಿ ಭವ್ಯ ಮೆರವಣಿಗೆಯನ್ನು ಶಿವಾಜಿ ವರ್ತುಲದಿಂದ ಕಲಾಭವನದ ವರೆಗೆ ಏರ್ಪಡಿಸಲಾಗಿತ್ತು.
ಈ ಭವ್ಯ ಮೆರವಣಿಗೆಯಲ್ಲಿ ಪಾಲಿಕೆಯ ಪೂಜ್ಯ ಮಹಾಪೌರರು ಹಾಗೂ ಉಪ ಮಹಾಪೌರರು, ವಿರೋಧ ಪಕ್ಷದ ನಾಯಕರು, ಮಾನ್ಯ ಆಯುಕ್ತ ಡಾ:- ಈಶ್ವರ ಉಳ್ಳಾಗಡ್ಡಿ ಪಾಲಿಕೆಯ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರುಗಳು, ಪಾಲಿಕೆಯ ಸದಸ್ಯರುಗಳು, ಪಾಲಿಕೆ ಅಧಿಕಾರಿಗಳು, ಸಿಬ್ಬಂದಿಗಳು, ವಿವಿಧ ಕನ್ನಡ ಪರ ಸಂಘಟನೆಗಳು, ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.