Channapatna: ಪ್ರಚಾರದ ವೇಳೆ ಬೈಕ್’ನಿಂದ ಬಿದ್ದ Nikhil Kumaraswamy

Share to all

ರಾಮನಗರ: ಚುನಾವಣೆ ಹತ್ತಿರವಾಗ್ತಿದ್ದಂತೆ ಮಿನಿ ಸಮರ ಮತ್ತಷ್ಟು ರಂಗೇರಿದೆ. ಎಚ್‌‌ಡಿಕೆ ಹಾಗೂ ಡಿಕೆ ಬ್ರದರ್ಸ್‌‌ ಪ್ರತಿಷ್ಠೆಯ ಕಣ ಚನ್ನಪಟ್ಣಣದಲ್ಲಿ ಅಭಿವೃದ್ಧಿಯ ವಾಗ್ಯುದ್ಧ ತಾರಕಕ್ಕೇರಿದೆ. ನಿಖಿಲ್‌ ಕಣ್ಣೀರನ್ನ ಸೈನಿಕ ಪ್ರಚಾರದ ಅಸ್ತ್ರ ಮಾಡಿಕೊಂಡಿದ್ದಾರೆ. ಇದರ ಮಧ್ಯೆ  ಚಾರದ ವೇಳೆ ನಿಖಿಲ್‌ ಕುಮಾರಸ್ವಾಮಿ ಬೈಕ್‌ನಿಂದ ಬಿದ್ದಿದ್ದಾರೆ.

ಚನ್ನಪಟ್ಟಣ ತಾಲೂಕಿನ ಮಂಗಾಡಹಳ್ಳಿಯಲ್ಲಿ ನಿಖಿಲ್‌ ಕಾರ್ಯಕರ್ತನ ಬೈಕ್‌ ಏರಿ ಪ್ರಚಾರ ನಡೆಸುತ್ತಿದ್ದರು. ಮಳೆ ನೀರಿನಿಂದ ಕೆಸರಾಗಿದ್ದ ರಸ್ತೆಯಲ್ಲಿ ಆಯತಪ್ಪಿ ಬಿದ್ದಿದ್ದಾರೆ. ತಕ್ಷಣವೇ ಸ್ಥಳೀಯ ಕಾರ್ಯಕರ್ತರು ನಿಖಿಲ್‌ ನೆರವಿಗೆ ಬಂದಿದ್ದು ಮೇಲಕ್ಕೆತ್ತಿ ಉಪಚರಿಸಿದ್ದಾರೆ. ಸ್ವಲ್ಪಹೊತ್ತು ವಿಶ್ರಾಂತಿ ಪಡೆದು ಮತ್ತೆ ನಿಖಿಲ್‌ ಕುಮಾರಸ್ವಾಮಿ ಪ್ರಚಾರ ಕಾರ್ಯ ಮುಂದುವರಿಸಿದರು.


Share to all

You May Also Like

More From Author