ಡಿ.ಕೆ ಶಿವಕುಮಾರ ಹೇಳಿಕೆ. ಮತ್ತಷ್ಟು ಆ್ಯಕ್ಟಿವ್ ಆದ ರಜತ.ಉಳ್ಳಾಗಡ್ಡಿಮಠ.
ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಧಾರವಾಡ ಲೋಕಸಭೆ ಅಭ್ಯರ್ಥಿ ಸೇರಿದಂತೆ ರಾಜ್ಯದ ಇತರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಯ ಮಾನದಂಡಗಳ ಕುರಿತು ಹೇಳಿಕೆ ನೀಡಿದ್ದಾರೆ
ಜೊತೆಗೆ ಧಾರವಾಡ ಲೋಕಸಭೆಗೆ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಹೊಸ ಮುಖ, ಯುವಕರು,ಪಕ್ಷ ನಿಷ್ಠೆ, ವಾಕ್ ಚಾತುರ್ಯ ಇವೆಲ್ಲಾ ಗಮನದಲ್ಲಿ ಇಟ್ಟುಕೊಂಡು ಅಭ್ಯರ್ಥಿ ಆಯ್ಕೆ ಮಾಡುತ್ತೇವೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದ್ದಾರೆ.
ಸದ್ಯ ಮುಂಬರುವ ಲೋಕಸಭೆ ಚುನಾವಣೆಯ ತಯಾರಿಯಲ್ಲಿರುವ ಯುವ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಅವರಿಗೆ ಡಿಸಿಎಂ ಡಿಕೆಶಿ ನೀಡಿರುವ ಹೇಳಿಕೆ ಮತ್ತಷ್ಟು ಉತ್ಸಾಹ ತುಂಬಿದ್ದು.ಡಿಕೆಸಿ ಹೇಳಿರುವುದು ಯುವಕರಿಗೆ,ವಾಕ್ ಚಾತುರ್ಯ,ಪಕ್ಷ ಸಂಘಟನೆ ಈ ಮೂರರಲ್ಲಿಯೂ ರಜತ್ ಮುಂದೆ ಇದ್ದಾರೆ. ಹೀಗಾಗಿ ರಜತಗೆ
ಪಕ್ಷ ಸಂಘಟನೆಗೆ ಮತ್ತಷ್ಟು ಬಲ ತುಂಬಿದಂತಾಗಿದೆ.
ಉದಯ ವಾರ್ತೆ ಹುಬ್ಬಳ್ಳಿ.